Latest

PSI ಹುದ್ದೆ ನೇಮಕಾತಿ ಅಕ್ರಮ; ಪೊಲೀಸ್ ಸಬ್ ಇನ್ಸ್ ಪೆಕ್ಟರ್ ನಾಪತ್ತೆ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: 545 ಪಿಎಸ್ ಐ ಹುದ್ದೆ ನೇಮಕಾತಿ ಪರೀಕ್ಷಾ ಅಕ್ರಮದಲ್ಲಿ ಇದೀಗ ಬೆಂಗಳೂರಿನ ಕೆ.ಆರ್.ಪುರಂ ಸಂಚಾರಿ ಠಾಣೆ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಭಾಗಿಯಾಗಿರುವುದು ಸಿಐಡಿ ತನಿಖೆಯಲ್ಲಿ ಪತ್ತೆಯಾಗಿದೆ.

ಕೆ.ಆರ್.ಪುರಂ ಟ್ರಾಫಿಕ್ ಸಬ್ ಇನ್ಸ್ ಪೆಕ್ಟರ್ ಸುಬ್ರಮಣಿ ಪ್ರಕರಣದಲ್ಲಿ ಭಾಗಿಯಾಗಿದ್ದು, ಕಳೆದ ಮೂರು ತಿಂಗಳಿಂದ ಆರೋಪಿ ನಾಪತ್ತೆಯಾಗಿದ್ದಾನೆ.

Home add -Advt

ಪಿಎಸ್ ಐ ಸುಬ್ರಮಣಿ ಹಲವು ಅಭ್ಯರ್ಥಿಗಳಿಂದ ಲಕ್ಷಾಂತರ ರೂಪಾಯಿ ಹಣ ಪಡೆದು ಡೀಲ್ ಮಾಡಿಕೊಂಡಿದ್ದರು. ಹೊಸಕೋಟೆಯ ಶಿವರಾಜು ಸೇರಿ ಇಬ್ಬರು ಅಭ್ಯರ್ಥಿಗಳಿಂದ ಲಕ್ಷ ಲಕ್ಷ ರೂಪಾಯಿ ಹಣ ಪಡೆದಿದ್ದರು. ಪಿಎಸ್ ಐ ಪೋಸ್ಟಿಂಗ್ ಮಾಡಿಕೊಂಡುವುದಾಹಿ ಹೇಳಿ ಸುಬ್ರಮಣಿ ಹಣ ಪಡೆದಿದ್ದಾಗಿ ತಿಳಿದುಬಂದಿದೆ. ಇದೀಗ ನಾಪತ್ತೆಯಾಗಿರುವ ಆರೋಪಿ ಸುಬ್ರಮಣಿಗಾಗಿ ಸಿಐಡಿ ಪೊಲಿಸರು ಹುಡುಕಾಟ ನಡೆಸಿದ್ದಾರೆ.

ಲೋಕಾಯುಕ್ತ ಮೆಟ್ಟಿಲೇರಿದ ಬೆಂಗಳೂರಿನ ಮಳೆ ಅವಾಂತರ ಪ್ರಕರಣ

https://pragati.taskdun.com/latest/bangalorefloodlokayuktacomplaint-file/

Related Articles

Back to top button