*ಬಿಜೆಪಿ ನಾಯಕರ ಬಾಯಲ್ಲಿ ಕಡುಬು ಸಿಕ್ಕಿಕೊಂಡಿತ್ತಾ; ಧಮ್ ಇದ್ರೆ ತನಿಖೆ ಮಾಡಿಸಲಿ; ಸವಾಲು ಹಾಕಿದ ಸಿದ್ದರಾಮಯ್ಯ*
ಪ್ರಗತಿವಾಹಿನಿ ಸುದ್ದಿ; ಚಿತ್ರದುರ್ಗ: ಕಾಂಗ್ರೆಸ್ ಅವಧಿಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂಬ ಸಿಎಂ ಬಸವರಾಜ್ ಬೊಮ್ಮಾಯಿ ಆರೋಪಕ್ಕೆ ಕೆಂಡಾಮಂಡಲ ಆಗಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ, ನನ್ನ ಅವಧಿಯಲ್ಲಿ ಭ್ರಷ್ಟಾಚಾರ ಆಗಿದ್ದರೆ ಈ ವರೆಗೆ ಬಿಜೆಪಿಯವರು ಯಾಕೆ ಕಣ್ಮುಚ್ಚಿ ಕುಳಿತಿದ್ದು? ಎಂದು ಪ್ರಶ್ನಿಸಿದ್ದಾರೆ.
ಚಿತ್ರದುರ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ಟೆಂಡರ್ ಪ್ರಕ್ರಿಯೆಯಲ್ಲಿ ಗೋಲ್ ಮಾಲ್ ನಡೆಯುತ್ತಿದೆ. ಎಲ್ಲಾ ಇಲಾಖೆಯ ಟೆಂಡರ್ ನಲ್ಲಿಯೂ ಭ್ರಷ್ಟಾಚಾರ ನಡೆದಿದೆ. ಸರ್ಕಾರದ ಶಾಸಕರೇ ಹೇಳುತ್ತಿದ್ದಾರೆ. ಇವರು ಅಧಿಕಾರಿಗಳು, ಗುತ್ತಿಗೆದಾರರು, ಶಾಸಕರು ಯಾರನ್ನೂ ಬಿಟ್ಟಿಲ್ಲ ಎಂದು ವಾಗ್ದಾಳಿ ನಡೆಸಿದರು.
ನಮ್ಮ ಅವಧಿಯಲ್ಲಿ ಭ್ರಷ್ಟಾಚಾರ ಆಗಿದೆ ಎಂದು ಸಿಎಂ ಹೇಳುತ್ತಿದ್ದಾರೆ. ನಮ್ಮ ಅಧಿಯಲ್ಲಿ ಆಗಿದ್ದರೆ ತನಿಖೆ ನಡೆಸಬೇಕಿತ್ತು. ಯಾಕೆ ಸುಮ್ಮನಿದ್ದೀರಿ? ಈ ಬಿಜೆಪಿ ಸರ್ಕಾರ ಬಂದು ಮೂರುವರೆ ವರ್ಷ ಆಗಿದೆ. ನಮ್ಮ ಸರ್ಕಾರದ ಅವಧಿಯಲ್ಲಿ ಭ್ರಷ್ಟಾಚಾರ ನಡೆದಿದ್ದರೆ ತನಿಖೆಗೆ ಕೊಡಬೇಕಿತ್ತು, ಯಾಕೆ ತನಿಖೆ ಮಾಡಿಸಿಲ್ಲ? ಬಿಜೆಪಿ ನಾಯಕರ ಬಾಯಿಯಲ್ಲಿ ಕಡುಬು ಸಿಕ್ಕಿಕೊಂಡಿತ್ತಾ? ಎಂದು ಗುಡುಗಿದ್ದಾರೆ.
ಸಿಎಂ ಬೊಮ್ಮಾಯಿ ಅವರಿಗೆ ಧಮ್ಮಿದ್ದರೆ ತನಿಖೆ ಮಾಡಿಸಲಿ. ಈಗಿನ ಎಲ್ಲಾ ಟೆಂಡರ್ ಗಳನ್ನು ತಕ್ಷಣ ರದ್ದು ಪಡಿಸಲಿ ಎಂದು ಸವಾಲು ಹಾಕಿದರು.
*ಕಾಂಗ್ರೆಸ್ ನಾಯಕರ ಆರೋಪಕ್ಕೆ ಸಿಎಂ ಬೊಮ್ಮಾಯಿ ತಿರುಗೇಟು*
https://pragati.taskdun.com/cm-basavaraj-bommaireactiontender-golmalcongress/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ