Kannada NewsKarnataka NewsLatest

19ರಂದು ಡಾ.ಯಲ್ಲಪ್ಪ ಹಿಮ್ಮಡಿಗೆ ಅಭಿನಂದನಾ ಸಮಾರಂಭ

ಪ್ರಗತಿವಾಹಿನಿ ಸುದ್ದಿ, ರಾಯಬಾಗ: ಇಲ್ಲಿನ ಸಾಹಿತಿ ಡಾ. ಯಲ್ಲಪ್ಪ ಹಿಮ್ಮಡಿ ವಿದ್ಯಾರ್ಥಿ ಬಳಗದ ವತಿಯಿಂದ ಡಾ. ಯಲ್ಲಪ್ಪ ಹಿಮ್ಮಡಿಯವರು ಸೇವಾ ನಿವೃತ್ತಿ ಹೊಂದಿದ ನಿಮಿತ್ತ ಅವರಿಗೆ ಅಭಿನಂದನಾ ಸಮಾರಂಭವನ್ನು ಫೆ.19ರಂದು ಬೆಳಗ್ಗೆ 10ಕ್ಕೆ ಅಂಕಲಿ ರಸ್ತೆಯ ಶ್ರೀ ಮಹಾವೀರ ಭವನದಲ್ಲಿ ಆಯೋಜಿಸಲಾಗಿದೆ.

ವಿದ್ಯಾರ್ಥಿಗಳಾದ ಡಾ.ಕೆ.ಎನ್.ದೊಡ್ಮನಿ, ಬೆಳಗಾವಿ, ಈರಣ್ಣ ಬೆಟಗೇರಿ, ಧಾರವಾಡ, ಡಾ.ವಿಜಯಮಾಲಾ ನಾಗನೂರಿ, ಸಂಕೇಶ್ವರ, ಸುಪ್ರಿಯಾ ಕಾಂಬಳೆ, ಕುಂದಗೋಳ, ರಾಜು ಸನದಿ, ಮೂಡಲಗಿ, ಅನಿತಾ ಲಂಗೋಟಿ, ಪುಣೆ ವಿದ್ಯಾರ್ಥಿಗಳು ಕಂಡಂತೆ ಡಾ. ಹಿಮ್ಮಡಿ ಮತ್ತು ಅವರ ಸಾಹಿತ್ಯ ಕುರಿತು ಮಾತನಾಡಲಿದ್ದಾರೆ. ವಿಜಯಪುರದ ಮಹಿಳಾ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ. ವಿಷ್ಣು ಶಿಂಧೆ ಅಧ್ಯಕ್ಷತೆ ವಹಿಸುವರು.

Home add -Advt

ಮಧ್ಯಾಹ್ನ 12ಕ್ಕೆ ಸಿ.ಎಸ್.ನಾಯಕ, ಬೆಳಗಾವಿ, ಎಲ್.ವಿ.ಪಾಟೀ, ಸಂಕೇಶ್ವರ ಅವರು ಗುರುವಂದನೆ ಸಲ್ಲಿಸುವರು. ಶಿಷ್ಯರಾದ ಡಾ.ಮಂಜುಳಾ ಸವದತ್ತಿ, ಬೀಡಿ ಹಾಗೂ ಫಿರ್ದೋಸ್ ಮುಷ್ರಫ್, ಮಿರಜ್ ಅವರಿಗೆ ಅಭಿನಂದನೆ ಕಾರ್ಯಕ್ರಮ ಜರುಗಲಿದೆ. ಡಾ.ಯಲ್ಲಪ್ಪ ಹಿಮ್ಮಡಿ, ಡಾ. ಯಲ್ಲಪ್ಪ ಹಿಮ್ಮಡಿ ಅಭಿನಂದನಾ ಸಮಿತಿ ಅಧ್ಯಕ್ಷ ಡಾ. ಸದಾಶಿವ ದೇಸಿಂಗೆ ಉಪಸ್ಥಿತರಿರುವರು.

ಸಂಜೆ 4.30ರಿಂದ ವಿದ್ಯಾರ್ಥಿ ಬಳಗ ಮತ್ತು ಸಾರ್ವಜನಿಕರಿಂದ ಸತ್ಕಾರ ಸಮಾರಂಭ ನಡೆಯಲಿದೆ. ಬಸವ ಬೆಳವಿ ವಿರಕ್ತ ಮಠದ ಶ್ರೀ ಶರಣಬಸವ ದೇವರು ಸಾನ್ನಿಧ್ಯ ವಹಿಸುವರು. ಡಾ. ಸದಾಶಿವ ದೇಸಿಂಗೆ ಅಧ್ಯಕ್ಷತೆ ವಹಿಸುವರು. ಧಾರವಾಡದ ಇತಿಹಾಸ ತಜ್ಞ ಡಾ. ಶಿವರುದ್ರ ಕಲ್ಲೋಳಿಕರ ಅಭಿನಂದನಾ ನುಡಿಗಳನ್ನಾಡುವರು. ಬೆಂಗಳೂರು ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ. ರಾಜಪ್ಪ ದಳವಿ ಮುಖ್ಯ ಅತಿಥಿಯಾಗಿ ಭಾಗವಹಿಸುವರು.

*ಬಿಜೆಪಿ ನಾಯಕರ ಬಾಯಲ್ಲಿ ಕಡುಬು ಸಿಕ್ಕಿಕೊಂಡಿತ್ತಾ; ಧಮ್ ಇದ್ರೆ ತನಿಖೆ ಮಾಡಿಸಲಿ; ಸವಾಲು ಹಾಕಿದ ಸಿದ್ದರಾಮಯ್ಯ*

https://pragati.taskdun.com/siddaramaiahreactioncm-basavaraj-bommai/

*ಕಾಂಗ್ರೆಸ್ ನಾಯಕರ ಆರೋಪಕ್ಕೆ ಸಿಎಂ ಬೊಮ್ಮಾಯಿ ತಿರುಗೇಟು*

https://pragati.taskdun.com/cm-basavaraj-bommaireactiontender-golmalcongress/

*ತೀವ್ರ ಕುತೂಹಲ ಮೂಡಿಸಿದ ಜೆ.ಪಿ.ನಡ್ಡಾ ನಡೆ; ಶೃಂಗೇರಿ ಮಠಕ್ಕೆ ಭೇಟಿ ನೀಡಲಿರುವ ಬಿಜೆಪಿ ರಾಷ್ಟ್ರಾಧ್ಯಕ್ಷ*

https://pragati.taskdun.com/j-p-naddavisitshrungeri-matafeb-20th/

 

Related Articles

Back to top button