Kannada NewsKarnataka NewsLatestPolitics

*ಪುತ್ರನ ವಿಡಿಯೋ ಬಗ್ಗೆ ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ*

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಯತೀಂದ್ರ ಸಿದ್ದರಾಮಯ್ಯ ವಿಡಿಯೋ ವೈರಲ್ ಬಗ್ಗೆ ವಿಪಕ್ಷಗಳು ವರ್ಗಾವಣೆ ದಂಧೆ ಆರೋಪ ಮಾಡುತ್ತಿರುವ ಬೆನಲ್ಲೇ ಸ್ಪಷ್ಟನೆ ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಿಎಸ್ ಆರ್ ಫಂಡ್ ವಿಚಾರವಾಗಿ ಯತೀಂದ್ರ ಮಾತನಾಡಿದ್ದಾರೆ ಅಷ್ಟೆ ಎಂದು ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಶ್ಕೂಲ್ ಬಿಲ್ಡಿಂಗ್, ಸಿಎಸ್ ಆರ್ ಫಂಡ್ ಬಗ್ಗೆ ಯತೀಂದ್ರ ಫೋನ್ ನಲ್ಲಿ ಮಾತನಾಡಿದ್ರು ಅಷ್ಟೇ. ಆದರೆ ರಾಜಕೀಯ ಕಾರಣಕ್ಕೆ ವಿಪಕ್ಷಗಳು ಆರೋಪ ಮಾಡುತ್ತಿವೆ ಎಂದು ಸ್ಪಷ್ಟ ಪಡಿಸಿದರು.

ಶಾಲಾ ಕಟ್ಟಡಗಳನ್ನು ಸಿ.ಎಸ್.ಆರ್. ನಿಧಿಯಿಂದ ನಿರ್ಮಿಸಲಾಗುತ್ತಿದೆ. ಸಚಿವ ಹೆಚ್.ಸಿ.ಮಹದೇವಪ್ಪ ಅವರು ಅದನ್ನು ಪಟ್ಟಿಯಲ್ಲಿ ನೀಡಿದ್ದಾರೆ ಎಂದರು.

ಐದು ಹೆಸರು ಹೇಳಿದರೆ ವರ್ಗಾವಣೆ ದಂಧೆಯಾಗುತ್ತಾ? ವಿಪಕ್ಷಗಳು ಏನೋ ಆರೋಪ ಮಾಡಿದ ಮಾತ್ರಕ್ಕೆ ನಿಜವಾಗಿಬಿಡಲ್ಲ. ನನ್ನ ರಾಜಕೀಯ ಜೀವನದಲ್ಲಿ ವರ್ಗಾವಣೆ ದಂಧೆ ಮಾಡಿಲ್ಲ. ವರ್ಗಾವಣೆ ದಂಧೆ ಮಾಡಿದ್ದರೆ ರಾಜಕೀಯದಿಂದಲೇ ನಿವೃತ್ತಿಯಾಗುತ್ತೇನೆ ಎಂದು ಹೇಳಿದರು.


Related Articles

Back to top button