ಪ್ರಗತಿ ವಾಹಿನಿ ಸುದ್ದಿ ಬಾಗಲಕೋಟೆ:
ಸಾರ್ವಜನಿಕರು ಕರೆ ಮಾಡಿದರೆ ಫೋನ್ ಸ್ವೀಕರಿಸದ ಬಗ್ಗೆ ಬಾದಾಮಿ ಮಹಿಳಾ ಪಿಎಸ್‌ಐಯನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ.
ಏನಮ್ಮಾ ಸಾರ್ವಜನಿಕರು ಫೋನ್ ಮಾಡಿದರೆ ಫೋನ್ ರಿಸೀವ್ ಮಾಡಲ್ವಾ ? ಎಂದು ಪಿಎಸ್‌ಐ ನೇತ್ರಾವತಿ ಪಾಟಿಲ್ ಅವರಿಗೆ ಸಿದ್ದರಾಮಯ್ಯ ಖಾರವಾಗಿ ಪ್ರಶ್ನಿಸಿದ್ದಾರೆ.
ಸಾರ್ವಜನಿಕರು ಫೋನ್ ಮಾಡಿದಾಗ ತಕ್ಷಣ ರಿಸೀವ್ ಮಾಡ್ಬೇಕು. ನಿಮಗೆ ಫೋನ್ ಕೊಟ್ಟಿರೋದು ರಿಸೀವ್ ಮಾಡಲಿಕ್ಕೆ ತಾನೆ ? ಯಾರೇ ಫೋನ್ ಮಾಡಿದರೂ ತಕ್ಷಣ ರಿಸೀವ್ ಮಾಡಬೇಕು ಎಂದು ಹೇಳಿದ್ದಾರೆ.
ಫೋನ್ ಮಾಡಿ ಸಮಸ್ಯೆ ಹೇಳಿಕೊಂಡವರ ಸಮಸ್ಯೆ ಕೇಳಬೇಕು. ಕಾನೂನು ಪ್ರಕಾರ ಕೆಲಸ ನಿರ್ವಹಿಸಬೇಕು ಎಂದು ಬುದ್ದಿ ಹೇಳಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ