ಪ್ರಗತಿವಾಹಿನಿ ಸುದ್ದಿ; ಜೈಪುರ: ಪರೀಕ್ಷೆಗೆ ಬಂದ ವಿದ್ಯಾರ್ಥಿನಿಯರ ಬಟ್ಟೆಯ ತೋಳನ್ನು ಮಹಿಳಾ ಪೊಲೀಸ್ ಸಿಬ್ಬಂದಿಗಳು ಕತ್ತರಿಸಿರುವ ಘಟನೆ ರಾಜಸ್ಥಾನದ ಭರತ್ ಪುರದಲ್ಲಿ ನಡೆದಿದೆ.
ಪರೀಕ್ಷಾ ಕೇಂದ್ರಕ್ಕೆ ಪರೀಕ್ಷೆ ಬರೆಯಲು ಬಂದ ವಿದ್ಯಾರ್ಥಿನಿಯರ ಪೋರ್ಣ ತೋಳಿನ ಬಟ್ಟೆಯನ್ನು ಮಹಿಳಾ ಪೊಲೀಸ್ ಸಿಬ್ಬಂದಿಗಳು ಕತ್ತರಿಯಿಂದ ಕತ್ತರಿಸಿದ್ದಾರೆ. ಈ ವೇಳೆ ವಿದ್ಯಾರ್ಥಿನಿಯರು ಕಣ್ಣೀರಿಟ್ಟಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆಗಿದೆ. ಅಲ್ಲದೇ ಪರೀಕ್ಷೆಗೆ ಹಾಜರಾದ ವಿವಾಹಿತ ಮಹಿಳೆಯರ ಚೈನ್ ಹಾಗೂ ಇತರ ಆಭರಣಗಳನ್ನು ಕೂಡ ತೆಗೆಯುವಂತೆ ಪೊಲೀಸರು ಸೂಚಿಸಿದ್ದಾರೆ.
ಪರೀಕ್ಷೆ ಬರೆಯಲು ಬರುವ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಮೊದಲೇ ಅರ್ಧ ತೋಳಿನ ಬಟ್ಟೆ, ಟೀ ಶರ್ಟ್, ಶರ್ಟ್, ಸೂಟ್, ಸೀರೆ ಧರಿಸಿ ಬರಲು ಸೂಚಿಸಲಾಗಿತ್ತು. ಕೂದಲಿಗೆ ಸರಳವಾದ ರಬ್ಬರ್ ಬ್ಯಾಂಡ್ ಧರಿಸಲು ಸೂಚಿಸಲಾಗಿತ್ತು. ಯಾವುದೇ ಮೊಬೈಲ್ ಫೋನ್, ಎಲೆಕ್ಟ್ರಿಕ್ ಡಿವೈಸ್, ಸರ, ಉಂಗುರ, ಕಿವಿಯೋಲೆ ಧರಿಸಲು ಅವಕಾಶವಿಲ್ಲ ಎಂದು ಮಾರ್ಗಸೂಚಿ ಹೊರಡಿಸಲಾಗಿತ್ತು. ಆದರೂ ಕೆಲ ವಿದ್ಯಾರ್ಥಿಗಳು ನಿಯಮ ಮೀರಿ ಆಗಮಿಸಿದ್ದರಿಂದ ಇಂತಹ ಕ್ರಮ ಕೈಗೊಳ್ಳಲಾಗಿದೆ ಎನ್ನಾಲಾಗಿದೆ. 3000 ಅಭ್ಯರ್ಥಿಗಳು ಪರೀಕ್ಷೆಗೆ ಆಗಮಿಸಿದ್ದು, ಪರೀಕ್ಷೆ ಶಾಂತಿಯುತ ವಾತಾವರಣದಲ್ಲಿ ನಡೆದಿದೆ ಎಂದು ಪೊಲಿಸ್ ಅಧಿಕಾರಿಗಳು ತಿಳಿಸಿದ್ದಾರೆ.
ಯುವತಿ ಮೇಲೆ ಆಸಿಡ್ ದಾಳಿ ಪ್ರಕರಣ; ಸ್ವಾಮೀಜಿಯಂತೆ ವೇಷ ಧರಿಸಿ ತಲೆಮರೆಸಿಕೊಂಡಿದ್ದ ಆರೋಪಿ ಕೊನೆಗೂ ಅರೆಸ್ಟ್
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ