ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಬೆಳಗಾವಿ ಸ್ಮಾರ್ಟ್ ಸಿಟಿ ಯೋಜನೆ ಈಗ ಒಂದು ಹಂತಕ್ಕೆ ಬಂದಿದೆ. ಯೋಜನೆಯ ನಿಜವಾದ ಚಿತ್ರಣ ಜನರಿಗೆ ಸಿಗಲು ಆರಂಭವಾಗಿದೆ. ಹಲವಾರು ಯೋಜನೆಗಳು ಮುಕ್ತಾಯದ ಹಂತಕ್ಕೆ ಬಂದಿದ್ದು, ಇನ್ನು ಕೆಲವು ಪ್ರಗತಿಯ ಹಂತದಲ್ಲಿದೆ.
ಕಮಾಂಡ್ ಆ್ಯಂಡ್ ಕಂಟ್ರೋಲ್ ಸೆಂಟರ್ ಸ್ಮಾರ್ಟ್ ಸಿಟಿ ಯೋಜನೆಯ ಅತ್ಯಂತ ಪ್ರಮುಖವಾದ ಯೋಜನೆ. ಸಂಪೂರ್ಣ ನಗರವನ್ನು ಒಂದೇ ಸ್ಥಳದಿಂದ ನಿಯಂತ್ರಿಸಬಹುದಾದ ವಿನೂತನವಾದ ಯೋಜನೆ ಇದು.
ವಿಶ್ವೇಶ್ವರ ನಗರದಲ್ಲಿರುವ ಸೆಂಟರ್ ಇಡೀ ನಗರದ ವ್ಯವಸ್ಥೆಯನ್ನು ನಿಯಂತ್ರಿಸುತ್ತದೆ. ಈ ಕೇಂದ್ರ ಹಂತ ಹಂತವಾಗಿ ಸಂಪರ್ಕ, ಸಾರಿಗೆ, ನೀರು ಸರಬರಾಜು, ಸಂಚಾರ ವ್ಯವಸ್ಥೆ, ಹವಾಮಾನ ಪರಿಸ್ಥಿತಿ, ಎಮರ್ಜನ್ಸಿ ಸಂದರ್ಭಗಳಲ್ಲಿ ತಕ್ಷಣ ಸ್ಪಂದನೆಯಂತಹ ಕಾರ್ಯವನ್ನು ನಿರ್ವಹಿಸುತ್ತದೆ.
9 ಕಡೆ ಸ್ಮಾರ್ಟ್ ಪೋಲ್
ಬೆಳಗಾವಿ ನಗರದ ವಿವಿಧ ಭಾಗಗಳಲ್ಲಿ ಸ್ಮಾರ್ಟ್ ಪೋಲ್ ಗಳನ್ನು ಸ್ಥಾಪಿಸಲಾಗುತ್ತದೆ. ಈಗಾಗಲೆ ಚನ್ನಮ್ಮ ವೃತ್ತ ಮತ್ತು ಗೋಗಟೆ ಸರ್ಕಲ್ ನಲ್ಲಿ ಸ್ಮಾರ್ಟ್ ಪೋಲ್ ನಿಲ್ಲಿಸಲಾಗಿದೆ.
ಇನ್ನು, ಆರ್ ಪಿಡಿ ಸರ್ಕಲ್, ಗೋವಾವೇಸ್, ಕೊಲ್ಲಾಪುರ ಸರ್ಕಲ್, ಬೋಗಾರ ವೇಸ್, ಕೆಪಿಟಿಸಿಎಲ್ ರೋಡ್, ಅಶೋಕಾ ಪಿಲ್ಲರ್, ವಡಗಾವಿ ಮುಖ್ಯರಸ್ತೆಯಲ್ಲಿ ಸಹ ಪೋಲ್ ನಿರ್ಮಾಣ ಕಾರ್ಯ ವಾರದಲ್ಲಿ ಪೂರ್ಣಗೊಳ್ಳಲಿದೆ.
ಈ ಸ್ಮಾರ್ಟ್ ಪೋಲ್ ಗಳು ಕಮಾಂಡ್ ಆ್ಯಂಡ್ ಕಂಟ್ರೋಲ್ ಸೆಂಟರ್ ಜೊತೆಗೆ ನೇರ ಸಂಪರ್ಕ ಹೊಂದಿರುತ್ತವೆ. ವಿಎಂಎಸ್ (ವೇರಿಯೇಬಲ್ ಮೆಸೇಜ್ ಸರ್ವೀಸ್) ವ್ಯವಸ್ಥೆಯಿಂದ ನಗರದ ವಿವಿಧ ಭಾಗಗಳ ಚಿತ್ರಣವನ್ನು ಕ್ಷಣ ಕ್ಷಣಕ್ಕೂ ರವಾನಿಸುತ್ತವೆ.
ಸ್ಮಾರ್ಟ್ ಪೋಲ್ ಗಳಲ್ಲಿ ಎನ್ವಿರಾನ್ ಮೆಂಟಲ್ ಸೆನ್ಸರ್, ಪ್ಯಾನಿಕ್ ಬಟನ್, ಟ್ವಿನ್ ಸ್ಪೀಕರ್, ಕ್ಯಾಮೆರಾ, ಡಿಸ್ಪ್ಲೆ ಬೋರ್ಡ್, ಎಲ್ಇಡಿ ಲೈಟ್, ಯುಪಿಎಸ್ ಇರಲಿವೆ.
ಎನ್ವಿರಾನ್ ಮೆಂಟಲ್ ಸೆನ್ಸರ್ ಆ ಪ್ರದೇಶದ ಪೊಲ್ಯೂಷನ್ ಲೆವೆಲ್ ಮಾಹಿತಿ ರವಾನಿಸಲಿದೆ. ಪೊಲ್ಯೂಷನ್ ತೀರಾ ಕೆಟ್ಟಿದ್ದರೆ ತಕ್ಷಣ ಸಂಬಂಧ ಪಟ್ಟ ಇಲಾಖೆಗೆ ಕಮಾಂಡ್ ಆ್ಯಂಡ್ ಕಂಟ್ರೋಲ್ ಸೆಂಟರ್ ಮಾಹಿತ ರವಾನಿಸುತ್ತದೆ.
ಟ್ವಿನ್ ಸ್ಪೀಕರ್ ಸಾರ್ವಜನಿಕರಿಗೆ ಯಾವುದಾದರೂ ಮಾಹಿತಿ, ಸೂಚನೆ ತಿಳಿಸುವುದಿದ್ದರೆ ಅನೌನ್ಸ್ ಮಾಡಲು ಬಳಸಬಹುದು. ಪ್ಯಾನಿಕ್ ಬಟನ್ ಯಾವುದಾದರೂ ಎಮೆರ್ಜನ್ಸಿ ಸಂದರ್ಭದಲ್ಲಿ ಉಪಯೋಗವಾಗುತ್ತದೆ. ಅಪಘಾತ, ಗಲಭೆಗಳು ನಡೆದಾಗ ಅದನ್ನು ಒತ್ತಿದರೆ ತಕ್ಷಣ ಪೊಲೀಸ್ ಮತ್ತಿತರ ಸಂಬಂಧಿಸಿದವರಿಗೆ ಸಂದೇಶ ರವಾನಿಸಲಾಗುತ್ತದೆ. ಬಟನ್ ಒತ್ತುವವರು ಕ್ಯಾಮೆರಾದಲ್ಲಿ ಸೆರೆಯಾಗುವಂತೆ ವ್ಯವಸ್ಥೆ ಮಾಡಲಾಗಿದೆ.
ಪೋಲ್ ಗೆ ಡಿಸ್ಪ್ಲೆ ಬೋರ್ಡ್ ಅಳವಡಿಸಲಾಗಿದ್ದು, ಸಾರ್ವಜನಿಕರಿಗೆ ಸಾಂದರ್ಭಿಕವಾಗಿ ಮಾಹಿತಿಗಳನ್ನು ನೀಡಲು, ಅರಿವು ಮೂಡಿಸಲು ಉಪಯೋಗಿಸಲಾಗುತ್ತದೆ. ವಿದ್ಯುತ್ ಕೈಕೊಟ್ಟ ಸಂದರ್ಭದಲ್ಲಿ ತಕ್ಷಣ ವಿದ್ಯುತ್ ಸರಬರಾಜು ಮಾಡಲು ಯುಪಿಎಸ್ ನ್ನು ಕೂಡ ಇಡಲಾಗುತ್ತದೆ.
ಸ್ಮಾರ್ಟ್ ಪೋಲ್ ಕೆಲಸ ಅತ್ಯಂತ ವೇಗವಾಗಿ ನಡೆಯುತ್ತಿದ್ದು, ವಾರದೊಳಗೆ ಎಲ್ಲ ಪೋಲ್ ಹಾಕಲಾಗುತ್ತದೆ. ಆದಷ್ಟು ಶೀಘ್ರದಲ್ಲಿ ಕಮಾಂಡ್ ಆ್ಯಂಡಾ ಕಂಟ್ರೋಲ್ ಸೆಂಟರ್ ಪ್ರಾಯೋಗಿಕ ಸೇವೆ ಆರಂಭಿಸಲಿದೆ.
-ಶಶಿಧರ ಕುರೇರ, ಸ್ಮಾರ್ಟ್ ಸಿಟಿ ಎಂಡಿ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ