National

*ಹೆಂಡತಿ ಮನೆ ಬಿಟ್ಟು ಹೋಗಿದ್ದಕ್ಕೆ ನಾದಿನಿಯನ್ನು ಹತ್ಯೆಗೈದ ಗಂಡ*

ಪ್ರಗತಿವಾಹಿನಿ ಸುದ್ದಿ: ಪತ್ನಿ ಮನೆ ಬಿಟ್ಟು ಹೋಗಿದ್ದಕ್ಕೆ ಕೋಪಗೊಂಡ ಪತಿ ಮಹಾಶಯ ನಾದಿನಿಯನ್ನೇ ಬರ್ಬರವಾಗಿ ಹತ್ಯೆಗೈದಿರುವ ಘೋರ ಘಟನೆ ನಡೆದಿದೆ.

Home add -Advt

ಪತ್ನಿ ಮನೆ ಬಿಟ್ಟು ಹೋಗಿದ್ದಕ್ಕೆ 10 ವರ್ಷದ ನಾದಿನಿಯಮ್ನ್ನು ಕೊಂದು ಶವವನ್ನು ಗೋಣಿ ಚೀಲದಲ್ಲಿ ತುಂಬಿ ಶಾಲು ಸುತ್ತಿ ಚಂಡೀಗಢದ ಬಜ್ಗೇರಾ ಚರಂಡಿಯಲ್ಲಿ ಬಿಸಾಕಿದ್ದ. ರಾಜ್ಯ ವಿಪತ್ತು ನಿರ್ವಹಣಾ ಪಡೆ ನೆರವಿನಿಂದ ಪೊಲೀಸರು ಶವವನ್ನು ಹೊರತೆಗೆದಿದ್ದಾರೆ.

ಬಾಲಕಿ ತಂದೆ ತನ್ನ ಕಿರಿಯ ಮಗಳು ಕಾಣೆಯಾಗಿದ್ದಾಲೆ ಎಂದು ಪಾಲಂ ವಿಹಾರ್ ಠಾಣೆಯಲ್ಲಿ ದೂರು ನೀಡಿದ್ದರು. ವಿಚಾರಣೆ ವೇಳೆ ಅವರ ಹಿರಿಯ ಮಗಳು ಹಾಗೂ ಅಳಿಯನ ನಡುವೆ ಜಗಳವಾಗಿರುವುದು ಹಾಗೂ ಹಾಗೂ ಆಕೆ ಮನೆ ಬಿಟ್ಟು ಹೋಗಿರುವ ವಿಚಾರ ತಿಳಿದುಬಂದಿದೆ.

ಅಳಿಯ ಕುಮಾರ್ ನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ನನ್ನ ಮದುವೆ ವಿವಾದದಲ್ಲಿ ನಾದಿನಿ ಮಧ್ಯಪ್ರವೇಶ ಮಾಡಿದ್ದಕ್ಕಾಗಿ ಆಕೆಯನ್ನು ಕೊಲೆ ಮಾಡಿದ್ದಾಗಿ ಬಾಯ್ಬಿಟ್ಟಿದ್ದಾನೆ. ನಮ್ಮ ಮದುವೆಯಾಗಿ ಆರು ವರ್ಷವಾಗಿತ್ತು. ಒಂದು ಮಗು ಕೂಡ ಇದೆ. ಆದರೆ ನನ್ನ ಪತ್ನಿ ಮನೆ ಬಿಟ್ಟು ಹೋಗಿದ್ದಾಳೆ. ಇದೇ ಸೇಡಿನಿಂದ ನಾದಿನಿಯನ್ನು ಕರೆದುಕೊಂಡು ಬಂದು ಕೊಲೆಗೈದು ಬಜ್ಗೇರಾ ಬಳಿ ಚರಂಡಿಗೆ ಬಿಸಾಕಿದ್ದಾಗಿ ತಿಳಿಸಿದ್ದಾನೆ. ಈ ಮೂಲಕ ಪತ್ನಿಯ ತಂದೆ-ತಾಯಿ ವಿರುದ್ಧವೂ ಸೇಡು ತೀರಿಸಿಕೊಂಡಿದ್ದೇನೆ ಎಂದಿದ್ದಾನೆ.

Related Articles

Back to top button