Belagavi NewsBelgaum NewsKannada NewsKarnataka NewsLatest

*ಬೆಳಗಾವಿ: ಚಿನ್ನದಂಗಡಿ ಮಾಲೀಕನಿಗೆ ಗನ್ ನಿಂದ ಹೊಡೆದು ಆಭರಣಗಳನ್ನು ದೊಚಲು ಕಳ್ಳರ ಯತ್ನ*

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಇತ್ತೀಚೆಗಷ್ಟೇ ಬೆಂಗಳೂರಿನಲ್ಲಿ ಚಿನ್ನದಂಗಡಿಗೆ ನುಗ್ಗಿದ ಕಳ್ಳರ ಗ್ಯಾಂಗ್ ಗನ್ ನಿಂದ ದಾಳಿ ನಡೆಸಿ ಅಂಗಡಿಯಲ್ಲಿದ್ದ ಕೆಜಿಗಟ್ಟಲೇ ಚಿನ್ನಾಭರಣ ದೋಚಿ ಪರಾರಿಯಾದ ಘಟನೆ ಬೆನ್ನಲ್ಲೇ ಬೆಳಗಾವಿಯಲ್ಲಿಯೂ ಅಂತದ್ದೇ ಕೃತ್ಯಕ್ಕೆ ಯತ್ನಿಸಿದ ಪ್ರಕರಣ ಬೆಳಕಿಗೆ ಬಂದಿದೆ.

Home add -Advt

ಬೆಳಗಾವಿಯ ಶಾಹು ನಗರದ ಸಂತೋಷಿ ಜ್ಯುವೆಲ್ಲರಿ ಶಾಪ್ ನಲ್ಲಿ ಈ ಘಟನೆ ನಡೆದಿದೆ. ಎಂದಿನಂತೆ ಜ್ಯುವೆಲ್ಲರಿ ಶಾಪ್ ಮಾಲೀಕ ಪ್ರಶಾಂತ್ ಹೊಂಡ್ರಾ ಇಂದು ಬೆಳಿಗ್ಗೆ ತಮ್ಮ ಅಂಗಡಿ ಬಾಗಿಲು ತೆರೆದಿದ್ದಾರೆ. ಈ ವೇಳೆ ಹಿಂದಿನಿಂದ ಬಂದ ಕಳ್ಳರ ಗ್ಯಾಂಗ್ ಗನ್ ಪಾಯಿಂಟ್ ನಲ್ಲಿ ಬೆದರಿಸಿದೆ. ಅಲ್ಲದೇ ಕೈಲಿದ್ದ ಗನ್ ನಿಂದ ಪ್ರಶಾಂತ್ ತಲೆಗೆ ಹೊಡೆದು ಹಲ್ಲೆ ಮಾಡಿದೆ.

ಅಂಗಡಿ ಮಾಲಿಕ ಕೂಗಿಕೊಂಡು ಕಿರುಚುತ್ತಿದ್ದಂತೆ ಕಳ್ಳರ ಗ್ಯಾಂಗ್ ಸ್ಥಳದಿಂದ ಎಸ್ಕೇಪ್ ಆಗಿದೆ. ಆರೋಪಿಗಳ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ತಲೆಯ ಭಾಗಕ್ಕೆ ಬಲವಾದ ಪೆಟ್ಟು ಬಿದ್ದು ಗಾಯಗೊಂಡಿರುವ ಪ್ರಶಾಂತ್ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಓರ್ವ ಆರೋಪಿ ಹೆಲ್ಮೆಟ್ ಧರಿಸಿ ಬಂದಿದ್ದರೆ ಇನ್ನೋರ್ವ ಆರೋಪಿ ಮುಖಕ್ಕೆ ಬಟ್ಟೆ ಕಟ್ತಿಕೊಂಡು ಬಂದು ಅಂಗಡಿ ಪ್ರವೇಶಿಸಿದ್ದ. ಸ್ಥಳಕ್ಕೆ ಎಪಿಎಂಸಿ ಠಾಣಾ ಪೊಲೀಸರು ಭೇಟಿ ನೀಡಿ ತನಿಖೆ ನಡೆಸಿದ್ದಾರೆ.

Related Articles

Back to top button