Latest

ಎಸ್ ಎಸ್ ಎಲ್ ಸಿ ರಿಸಲ್ಟ್; ದಿನಾಂಕ ಪ್ರಕಟಿಸಿದ ಸಚಿವ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಆಗಸ್ಟ್ 6 ಇಲ್ಲವೇ ಆಗಸ್ಟ್ 8ರಂದು ಎಸ್ ಎಸ್ ಎಲ್ ಸಿ ಪರೀಕ್ಷಾ ಫಲಿತಾಂಶ ಪ್ರಕಟಿಸಲಾಗುವುದು ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ.

ಚಾಮರಾಜನಗರದಲ್ಲಿ ಮಾತನಾಡಿದ ಸಚಿವ ಸುರೇಶ್ ಕುಮಾರ್, ಜುಲೈ 3ನೇ ತಾರೀಖು ಎಸ್.ಎಸ್.ಎಲ್.ಸಿ ಪರೀಕ್ಷೆ ಮುಗಿದಿದೆ. ಈಗಾಗಲೇ ಎಲ್ಲಾ ಜಿಲ್ಲೆಯಲ್ಲಿಯೂ ಮೌಲ್ಯಮಾಪನ ಬಹುತೇಕ ಮುಕ್ತಾಯವಾಗಿದೆ. ಆಗಸ್ಟ್ 6 ಇಲ್ಲವೇ 8 ರೊಳಗೆ ಫಲಿತಾಂಶ ಪ್ರಕಟವಾಗಲಿದೆ ಎಂದರು.

Home add -Advt

ಇದೇ ವೇಳೆ ಪ್ರತಿ ವರ್ಷ ನಮಗೆ 240 ದಿನ ಶೈಕ್ಷಣಿಕ ಅವಧಿ ಸಿಗುತ್ತಿತ್ತು. ಆದರೆ ಈ ಬಾರಿ ಕೋವಿಡ್ ನಿಂದಾಗಿ ಅಷ್ಟು ದಿನಗಳು ಸಿಗುವುದಿಲ್ಲ. 120 ರಿಂದ 140 ದಿನಗಳು ಸಿಗಬಹುದು ಅಷ್ಟೆ. ಈ ಹಿನ್ನೆಲೆಯಲ್ಲಿ ಶೇ.30 ರಷ್ಟು ಪಠ್ಯ ತೆಗೆಯಲು ನಿರ್ಧಾರ ಮಾಡಲಾಗಿತ್ತು. ಡಿ.ಎಸ್.ಇ.ಆರ್.ಟಿ. ಟೆಸ್ಟ್ ಬುಕ್ ಕಮಿಟಿ ಇಂತಹ ಕೆಲ ನಿರ್ಧಾರಗಳನ್ನು ತೆಗೆದುಕೊಂಡಿದೆ ಎಂದು ಹೇಳಿದರು.

ವಿದ್ಯಾರ್ಥಿಗಳು ಒಂದೇ ವಿಷಯಗಳನ್ನು ಬೇರೆ ಬೇರೆ ಕ್ಲಾಸ್ ಗಳಲ್ಲಿ ಓದುವುದರಿಂದ ಅಂತಹ ಕೆಲ ವಿಷಯಗಳನ್ನು ತೆಗೆದು ಹಾಕುತ್ತಿದ್ದಾರೆ ಇದರಿಂದ ಟಿಪ್ಪು ಪಠ್ಯ ವಿಷಯದ ಬಗ್ಗೆ ಗೊಂದಲವಿದೆ ಎಂದು ತಿಳಿಸಿದರು.

Related Articles

Back to top button