Belagavi NewsBelgaum NewsHealthKannada NewsKarnataka NewsNationalPolitics

*ಬಿಮ್ಸ್ ನಲ್ಲಿ ಅತ್ಯಾಧುನಿಕ ನೇತ್ರ ಚಿಕಿತ್ಸಾ ಸೌಲಭ್ಯ : ನಿರ್ದೇಶಕ ಡಾ. ಅಶೋಕ ಕುಮಾರ ಶೆಟ್ಟಿ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ವೈದ್ಯಕೀಯ ವಿಜ್ಞಾನ ಸಂಸ್ಥೆ (ಬಿಮ್ಸ್) ಯ ನೇತ್ರ ಚಿಕಿತ್ಸಾ ವಿಭಾಗದಲ್ಲಿ ಕಣ್ಣು ಮತ್ತು ದೃಷ್ಟಿ ವ್ಯವಸ್ಥೆಗೆ ಸಂಬಂಧಿಸಿದ ಕಾಯಿಲೆಗಳ ನಿರ್ಣಯ, ಚಿಕಿತ್ಸೆ ಮತ್ತು ತಡೆಗಟ್ಟುವಿಕೆಗೆ ಕೇಂದ್ರೀಕರಿಸಿದ ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು, ಸಮರ್ಪಿತ ತಜ್ಞರ ತಂಡದ ಮೂಲಕ ಉತ್ತಮ ಮಟ್ಟದ, ಸಮಗ್ರ ನೇತ್ರ ಚಿಕಿತ್ಸೆಯನ್ನು ಒದಗಿಸಿ ದೃಷ್ಟಿಯನ್ನು ಸಂರಕ್ಷಿಸುವ ಸೌಲಭ್ಯ ಹೊಂದಿದೆ ಎಂದು ಚಿಮ್ಸ್ ನಿರ್ದೇಶಕ ಡಾ. ಅಶೋಕ ಕುಮಾರ ಶೆಟ್ಟಿ ತಿಳಿಸಿದ್ದಾರೆ.

ಮಾಸಿಕ ಹೊರರೋಗಿಗಳ ಸಂಖ್ಯೆಯು ದಿನಕ್ಕೆ ಸುಮಾರು 150 ರಷ್ಟಿದ್ದು, ತಿಂಗಳಿಗೆ ಸುಮಾರು 200 ಶಸ್ತ್ರಚಿಕಿತ್ಸೆಗಳು ನಡೆಯುತ್ತಿವೆ. ನಿಯಮಿತವಾಗಿ ಶಿಬಿರಗಳ ಮೂಲಕ ಗ್ರಾಮೀಣ ಜನತೆಗೆ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ತಿಳಿಸಿದ ಡಾ. ಶೆಟ್ಟಿ, ರೋಗನಿರ್ಣಯ ಮತ್ತು ಫೇಕೊಎಮಲ್ಸಿಫಿಕೇಶನ್ ಸೇರಿದಂತೆ ಆಧುನಿಕ ಶಸ್ತ್ರಚಿಕಿತ್ಸಾ ವಿಧಾನಗಳು, ಐಒಎಲ್ ಇಂಪ್ಲಾಂಟೇಶನ್ ಸಹಿತ, ಬಿಪಿಎಲ್ ಕಾರ್ಡ್‌ದಾರರಿಗೆ ಉಚಿತವಾಗಿ ಮತ್ತು ಎಪಿಎಲ್ ರೋಗಿಗಳಿಗೆ ಸಬ್ಸಿಡಿ ದರಗಳಲ್ಲಿ ಚಿಕಿತ್ಸೆ ದೊರೆಯಲಿದೆ.

Home add -Advt

ನೇತ್ರ ಚಿಕಿತ್ಸೆಗೆ ಸಂಬಂಧಿಸಿದಂತೆ ಮೂಲ ಸೇವೆಗಳಾದ ಗ್ಲಕೋಮಾ ನಿರ್ವಹಣೆ, ರೆಟಿನಾ ಸೇವೆಗಳು, ಡಯಾಬೆಟಿಕ್ ರೆಟಿನೋಪಥಿ, ಮ್ಯಾಕ್ಯುಲರ್ ಡಿಜನರೇಶನ್ ಮುಂತಾದ ಕಾಯಿಲೆಗಳ ನಿರ್ವಹಣೆ, ಅತಿ ನಿಖರವಾದ ಪರೀಕ್ಷೆಗಳು ಮತ್ತು ಲೇಸರ್ ಚಿಕಿತ್ಸೆಗಳಿವೆ.

ಮಕ್ಕಳ ನೇತ್ರ ಮತ್ತು ಕಾಂದಿಚುಕ್ಕು (ಸ್ವಾಬಿಸ್ಕಸ್) ಚಿಕಿತ್ಸೆ, ಕಾರ್ನಿಯಾ ಮತ್ತು ಕಣ್ಣಿನ ಮೇಲ್ಮೈ ವಿಭಾಗದ ಚಿಕಿತ್ಸೆ, ಓಕುಲೋಪ್ಲಾಸ್ಟಿಕ್ ಸೇವೆಗಳಿದ್ದು, ನಿಖರ ನಿರ್ಣಯ ಮತ್ತು ಪರಿಣಾಮಕಾರಿ ಚಿಕಿತ್ಸೆಗೆ ಅಗತ್ಯವಾದ ಅತ್ಯಾಧುನಿಕ ಉಪಕರಣಗಳನ್ನು ಹೊಂದಲಾಗಿದೆ.

ಈ ಎಲ್ಲಾ ಅತ್ಯಾಧುನಿಕ ತಂತ್ರಜ್ಞಾನಗಳು, ಡಾ.ನಂದಗಾವಿ ಸೇರಿದಂತೆ ಇನ್ನಿತರ ಪರಿಣಿತ ಸಿಬ್ಬಂದಿ ಮತ್ತು ನಮ್ಮ ಪದವಿಯೋತ್ತರ ವಿದ್ಯಾರ್ಥಿಗಳ ಸಮರ್ಪಿತ ಸೇವೆಗಳ ಮೂಲಕ ನೇತ್ರಚಿಕಿತ್ಸಾ ವಿಭಾಗ ಎಲ್ಲಾ ರೋಗಿಗಳಿಗೆ ಉತ್ತಮ, ಸಮಗ್ರ ನೇತ್ರ ಸೇವೆಯನ್ನು ಒದಗಿಸಲು ಮತ್ತು ವಿದ್ಯಾರ್ಥಿಗಳಿಗೆ ಅತ್ಯುತ್ತಮ ಕಲಿಕೆ ಅನುಭವಗಳನ್ನು ನೀಡಲು ಬದ್ಧವಾಗಿದೆ ಎಂದು ಡಾ. ಅಶೋಕ್ ಕುಮಾರ್ ಶೆಟ್ಟಿ ತಿಳಿಸಿದ್ದಾರೆ.

Related Articles

Back to top button