ಪ್ರಗತಿವಾಹಿನಿ ಸುದ್ದಿ: ಮಾಂಸ ಕೊಡಲು ನಿರಾಕರಿಸಿದ ಎಂಬ ಕಾರಣಕ್ಕೆ ಮಾಂಸದ ಅಂಗಡಿಯ ಮುಂದೆ ವ್ಯಕ್ತಿಯೊಬ್ಬ ಸ್ಮಶಾನದಿಂದ ಕೊಳೆತ ಶವ ತಂದು ಅದನ್ನು ಎಸೆದು ಹೋಗಿರುವಂತಹ ವಿಚಿತ್ರ ಘಟನೆ ನಡೆದಿರುವುದು ಬೆಳಕಿಗೆ ಬಂದಿದೆ.
ತಮಿಳುನಾಡಿನ ಪಳನಿ ಚೆಟ್ಟಿಪಟ್ಟಿಯಲ್ಲಿ ಈ ಘಟನೆ ನಡೆದಿದೆ ಎನ್ನಾಗಿದೆ. ಮಾಹಿತಿ ಪ್ರಕಾರ ಮಾಂಸದ ಅಂಗಡಿ ಮಾಲೀಕ ಮಣಿಯರಸನ್‌ಗೆ ಪಕ್ಕದ ಸ್ಮಶಾನದಲ್ಲಿ ಕೆಲಸ ಮಾಡುತ್ತಿದ್ದ ಕುಮಾರ್ ಖಾಯಂ ಗಿರಾಕಿ ಆಗಿದ್ದ. ಅದರಂತೆ ಕುಮಾರ್ ಭಾನುವಾರ ಮಾಂಸ ಕೊಡುವಂತೆ ಮಣಿಯರಸನ್‌ಗೆ ಕೇಳಿದ್ದ ಆದರೆ ಈ ವೇಳೆ ಮಣಿಯರಸನ್ ಮಾಂಸ ನೀಡಲು ನಿರಾಕರಿಸಿದ್ದಾನೆ.ಈ ವೇಳೆ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದಿದೆ. ಸಿಟ್ಟಿನಿಂದ ಕುಮಾರ್ ಅಲ್ಲಿಂದ ತೆರಳಿದ್ದಾನೆ. ಸ್ವಲ್ಪ ಹೊತ್ತಿನ ಬಳಿಕ ಮಾಂಸದಂಗಡಿ ಬಳಿ ಬಂದ ಕುಮಾರ್ ಕೊಳೆತ ಶವವವೊಂದನ್ನು ಎಸೆದು ಪರಾರಿಯಾಗಿದ್ದಾನೆ. ಇದನ್ನು ಕಂಡ ಅಂಗಡಿ ಮಾಲೀಕ ತಬ್ಬಿಬ್ಬಾಗಿ ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ನಂತರ ಸ್ಥಳಕ್ಕೆ ಆಗಮಿಸಿದ ಪೊಲೀಸರು ಕೊಳೆತ ಶವವನ್ನು ವಿಲೇವಾರಿ ಮಾಡಿದ್ದಾರೆ. ಪರಾರಿಯಾದ ಕುಮಾರ್‌ಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ