Kannada NewsKarnataka News

ಜಿಲ್ಲಾಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿನಿಯರು

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ -ಉಷಾತಾಯಿ ಗೋಗಟೆ ಬಾಲಕಿಯರ ಪ್ರೌಢಶಾಲೆಯ ೯ನೇ ತರಗತಿಯ ವಿದ್ಯಾರ್ಥಿನಿಯರು ನಗರ ವಲಯ ಮಟ್ಟದಲ್ಲಿ ಕರ್ನಾಟಕದಲ್ಲಿ ಆದಂತಹ ಪ್ರವಾಹದ ಭೀಕರ ಪರಿಣಾಮಗಳ ಕುರಿತು ನಾಟಕ ಪ್ರದರ್ಶಿಸಿದ್ದರು.

ಈ ನಾಟಕದಲ್ಲಿ ಅವರು ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಪೂಜಾ ಗರಗ & ಕೀರ್ತಿ ಮಹೇಂದ್ರಕರ ಅವರು ಪ್ರವಾಹ ಪೀಡಿತರು ಅನುಭವಿಸಿದ ಕಷ್ಟಗಳ ಕುರಿತು ಅಭಿನಯಿಸಿದ್ದರು. ಪ್ರವಾಹದಲ್ಲಿ ಸಿಲುಕಿ ವಿದ್ಯಾಭ್ಯಾಸವನ್ನು ನಿಲ್ಲಿಸಿದ ಮಗಳಾಗಿ ದಿಶಾ ವನಕುದ್ರೆ ಅವರು ಅಭಿನಯಿಸಿದ್ದರು. ವೈಶಾಲಿ ಹಜೇರಿ ಅವರು ಪ್ರವಾಹ ಪೀಡಿತರಿಗೆ ಸೈನಿಕರು, ಪೋಲಿಸರು ಮತ್ತು ಅಗ್ನಿ ಶಾಮಕ ದಳದವರು ಮಾಡಿದ ರಕ್ಷಣೆಯ ಕುರಿತು ಅಭಿನಯಿಸಿದ್ದರು. ಮಾನ್ಯತಾ ಕಾಮಕರ ಅವರು ಅಧಿಕಾರಿಯಾಗಿ & ಭೂಮಿಕಾ ಉಪಾಧ್ಯೇಯ ಅವರು ಸಹಾಯಕರಾಗಿ ಅವರು ಪ್ರವಾಹ ಪೀಡಿತರಿಗೆ ಅಧಿಕಾರಿಗಳು ಮಾಡಿದ ಸಹಾಯದ ಕುರಿತು ವಾರ್ತೆಗಳನ್ನು ಪೂಜಾ ಹರಣಿಯವರು ನ್ಯೂಸ್ ರಿಪೋರ್ಟರ್ ಆಗಿ ವರದಿ ತಿಳಿಸಿದರು.

ವಿದ್ಯಾರ್ಥಿನಿಯರು ಈ ನಾಟಕ ಪ್ರದರ್ಶಿಸುವುದರ ಮೂಲಕ,
೧) ನಾವೆಲ್ಲರು ಕಡ್ಡಾಯವಾಗಿ ಮತದಾನ ಮಾಡಬೇಕು.
೨) ಹಬ್ಬಗಳಲ್ಲಿ ಪಟಾಕಿಗಳನ್ನು ಹಾರಿಸಿ ಹಣವನ್ನು ಖರ್ಚು ಮಾಡುವುದರ ಬದಲು ಪ್ರವಾಹ ಪೀಡಿತರಿಗೆ ಆ ಹಣದಿಂದ ಸಹಾಯ ಮಾಡಬೇಕು.
೩) ನಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಂಡು ಭಾರತವನ್ನು ರೋಗ ಮುಕ್ತ ದೇಶವನ್ನಾಗಿ ಮಾಡುವುದು ಪ್ರಜೆಗಳ ಕರ್ತವ್ಯ.
೪) ಭಾರತದ ಗಡಿಯಲ್ಲಿ ಹಗಲು ರಾತ್ರಿ ನಿಂತು ಚಳಿ – ಮಳೆ ಬಿಸಿಲು ಎನ್ನದೇ ನಮ್ಮನ್ನು ರಕ್ಷಿಸುತ್ತಿರುವ ಸೈನಿಕರಿಗೆ ನಮ್ಮ ಗೌರವ ಸಲ್ಲಬೇಕು ಎನ್ನುವ ಮಾನವೀಯತೆಯ ಗುಣಗಳನ್ನು ಅಳವಡಿಸಲು ಪ್ರಯತ್ನಿಸಿದರು.
ಅದೇ ರೀತಿ ಹಿಂದಿ ಭಾಷಣ ಸ್ಪರ್ಧೆಯಲ್ಲಿ ದಾನೇಶ್ವರಿ ಪ್ರಜಾರಿ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾಳೆ.
ಬೆಳಗಾವಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಅವಿನಾಶ ಪೊತದಾರ, ಕಾರ್ಯದರ್ಶಿಗಳಾದ ಶ್ರೀನಿವಾಸ ಶಿವಣಗಿ, ಉಪಾಧ್ಯಕ್ಷರಾದ ಸುಧೀರ ಕುಲಕರ್ಣಿ ಹಾಗೂ ಶಿಕ್ಷಕರು & ಪಾಲಕರು ಯಶಸ್ವಿ ವಿದ್ಯಾರ್ಥಿನಿಯರನ್ನು ಅಭಿನಂದಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button