
ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ಸಚಿವ ಶಿವರಾಮ ಹೆಬ್ಬಾರ್ ಕೈಯಿಂದ ಸಕ್ಕರೆ ಖಾತೆಯನ್ನು ಹಿಂದಕ್ಕೆ ಪಡೆಯಲಾಗಿದೆ.
ಕಾರ್ಮಿಕ ಮತ್ತು ಸಕ್ಕರೆ ಖಾತೆ ಹೊಂದಿದ್ದ ಸಚಿವ ಶಿವರಾಮ ಹೆಬ್ಬಾರ್ ಅವರಿಗೆ ನಿರಾಸೆಯಾಗಿದೆ. ಅವರ ಕೈಯಲ್ಲಿದ್ದ ಸಕ್ಕರೆ ಖಾತೆಯನ್ನು ಹಿಂದಕ್ಕೆ ಪಡೆಯಲಾಗಿದೆ. ಈಗ ಕೇವಲ ಕಾರ್ಮಿಕ ಖಾತೆ ಮಾತ್ರ ಅವರಿಗಿದೆ.
ಕೆ.ಗೋಪಾಲಯ್ಯ ಅವರಿಗೆ ಸಕ್ಕರೆ ಖಾತೆಯನ್ನು ನೀಡಲಾಗಿದೆ.
ಖಾತೆ ಬದಲಾವಣೆ ಹಿನ್ನೆಲೆಯಲ್ಲಿ ಹಲವಾರು ಸಚಿವರು ಅಸಮಾಧಾನ ವ್ಯಕ್ತಪಡಿಸಿದ್ದು, ಸಚಿವ ಸುಧಾಕರ್ ಅವರ ನಿವಾಸದಲ್ಲಿ ಸಭೆ ನಡೆಸಿದ್ದಾರೆ.
ಕೆಲವರು ಬಹಿರಂಗವಾಗಿ ಅಸಮಾಧಾನ ತೋರ್ಪಡಿಸಿದ್ದರೆ ಇನ್ನು ಕೆಲವರು ಸಿಎಂ ಭೇಟಿ ಮಾಡಲು ನಿರ್ಧರಿಸಿದ್ದಾರೆ.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತುಮಕೂರಿನಿಂದ ವಾಪಸ್ ಬಂದ ನಂತರ ಅಸಮಾಧಾನಿತರು ಭೇಟಿಯಾಗುವ ಸಾಧ್ಯತೆ ಇದೆ.
ಯಾರಿಗೆ ಯಾವ ಖಾತೆ; ಯಾರದ್ದು ಬದಲಾವಣೆ? ಇಲ್ಲಿದೆ ಮಾಹಿತಿ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ