GIT add 2024-1
Beereshwara 33

 *ಕ್ಷೇತ್ರದ ಮತ್ತಷ್ಟು ಅಭಿವೃದ್ದಿಗೆ ಬಿಜೆಪಿ ಅಭ್ಯರ್ಥಿ ಅಣ್ಣಾಸಾಹೇಬ ಜೊಲ್ಲೆ ಬೆಂಬಲಿಸಿ*

Anvekar 3
Cancer Hospital 2

ಸಂಸದ ಅಣ್ಣಾಸಾಹೇಬ ಜೊಲ್ಲೆ ಪರ ಬಸವಪ್ರಸಾದ ಜೊಲ್ಲೆ ಭರ್ಜರಿ ಪ್ರಚಾರ

ಪ್ರಗತಿವಾಹಿನಿ ಸುದ್ದಿ, ಅಥಣಿ – ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ಅಥಣಿ ವಿಧಾನಸಭೆ ಕ್ಷೇತ್ರದ ಬುಧವಾರ ಅಡಹಳ್ಳಿ,  ಅಡಳಟ್ಪಿ, ಯಕ್ಕ0ಚಿ, ಕೊಹಳ್ಳಿ ಕಕಮರಿ, ಕೊಟ್ಟಲಗಿ, ತೆಲಸಂಗ  ಐಗಳಿ, ಬಡಚಿ, ಕನ್ನಾಳ , ವಿವಿಧ ಗ್ರಾಮದಲ್ಲಿ ಬಿಜೆಪಿ ಅಧಿಕೃತ ಅಭ್ಯರ್ಥಿ  ಅಣ್ಣಾಸಾಹೇಬ ಜೊಲ್ಲೆ ಅವರ ಪರವಾಗಿ ಬಸವಜ್ಯೋತಿ ಯೂಥ್ ಫೌಂಡೇಶನ್ ಅಧ್ಯಕ್ಷ ಬಸವಪ್ರಸಾದ ಜೊಲ್ಲೆ ಪ್ರಚಾರ ಕೈಗೊಂಡು ಮತಯಾಚನೆ ಮಾಡಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

Emergency Service

ದೇಶದ ಉನ್ನತಿಗಾಗಿ ಹಗಲಿರುಳು ದುಡಿಯುತ್ತಿರುವ ಪ್ರಧಾನ ಮಂತ್ರಿಗಳ ವಿಕಸಿತ ಭಾರತದ ಸಂಕಲ್ಪಕ್ಕೆ ನಾವೆಲ್ಲರೂ ಬದ್ಧರಾಗಿ ಕೆಲಸ ಮಾಡಬೇಕಾಗಿದೆ. ತಮ್ಮ ಮೊದಲ ಅವಧಿಯಲ್ಲಿ ಅಣ್ಣಾಸಾಹೇಬ ಜೊಲ್ಲೆ ಅವರು ಲೋಕಸಭಾ ಕ್ಷೇತ್ರದಲ್ಲಿ ರಸ್ತೆ, ಜಲಜೀವನ ಮಿಶನ್, ದೇವಸ್ಥಾನ ಅಭಿವೃದ್ದಿ, ಫಲಾನುಭವಿಗಳಿಗೆ ಉಜ್ವಲಾ ಗ್ಯಾಸ್, ಪ್ರಧಾನಮಂತ್ರಿ ಪರಿಹಾರ ನಿಧಿ ಅಂಗವಿಕಲರಿಗೆ ತ್ರಿಚಕ್ರ ವಾಹನ ಹೀಗೆ 8,810 ಕೋಟಿ ರೂಗಳಿಗಿಂತ ಅಧಿಕ ಅಭಿವೃದ್ಧಿ ಮಾಡಿದ್ದಾರೆ. ಮತ್ತಷ್ಟು ಕ್ಷೇತ್ರವನ್ನು ಅಭಿವೃದ್ಧಿ ಮಾಡಲು ಬಿಜೆಪಿ ಗೆಲುವಿಗೆ ಕಾರ್ಯಕರ್ತರು ಕೆಲಸ ಮಾಡಬೇಕಿದೆ. ಹಾಗೂ ಕ್ಷೇತ್ರದಲ್ಲಿ ಬಿಜೆಪಿಯನ್ನು ಮತ್ತೊಮ್ಮೆ ಗೆಲ್ಲಿಸಿ, ಮೋದಿಜಿ ಅವರ ಕೈಬಲಪಡಿಸೋಣ.

ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಮಹೇಶ ಕುಮಟಳ್ಳಿ, ಮಂಡಲ ಅಧ್ಯಕ್ಷರ ರವಿ ಸಂಕ, ಸಿದ್ದಪ್ಪ ಮುದಕನ್ನವರ್, ಪ್ರಭಾಕರ ಚವ್ಹಾಣ, ನಿಂಗಪ್ಪ ಖೋಕಲೆ, ಅಭಿಜಿತ್ ಕೊಡಗ,,ಶ್ರೀಶೈಲ ಇಂಚಾಗೇರಿ, ಬಸವರಾಜ ರುಡಗಿ, ಸ್ಥಳೀಯ ಮುಖಂಡರು,ಗಣ್ಯರು,,ಪಕ್ಷದ ಕಾರ್ಯಕರ್ತರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

Laxmi Tai add
Bottom Add3
Bottom Ad 2