
ಪ್ರಗತಿವಾಹಿನಿ ಸುದ್ದಿ: ಈಜುಕೊಳದಲ್ಲಿ ಮುಳುಗಿ ಉಸಿರು ಕಟ್ಟಿಕೊಂಡು ಒಂದು ನಿಮಿಷದಲ್ಲಿ 28 ಬಾರಿ ಸಮ್ಮರ್‌ಸಾಲ್ಟ್ ಮಾಡಿ ವರ್ಲ್ಡ್ ವೈಡ್ ಬುಕ್ ಆಫ್ ರೆಕಾರ್ಡ್‌ನಲ್ಲಿ ಸ್ಥಾನ ಪಡೆದಿದ್ದ ಈಜುಪಟು ಈಜುಕೊಳದಲ್ಲೆ ಮುಳುಗಿ ಸಾವನ್ನಪ್ಪಿದ್ದಾನೆ.
ಮಂಗಳೂರು ನಗರದ ಲೇಡಿಹಿಲ್‌ನಲ್ಲಿರುವ ಮಹಾನಗರ ಪಾಲಿಕೆಯ ಈಜುಕೊಳದಲ್ಲಿ ಈಜು ತರಬೇತುದಾರ ಮತ್ತು ಜೀವರಕ್ಷರಾಗಿದ್ದ ರಾಷ್ಟ್ರೀಯ ಈಜುಪಟು ಕೆ. ಚಂದ್ರಶೇಖರ್ ರೈ ಸೂರಿಕುಮೇರು (52) ಅವರು ಈಜುತ್ತಿದ್ದ ವೇಳೆ ಹೃದಯಾಘಾತವಾಗಿ ಮೃತಪಟ್ಟಿದ್ದಾರೆ.
ನಿರ್ವಹಣೆಯ ಕೆಲಸಗಳ ಕಾರಣದಿಂದ ಈಜು ಕೊಳಕ್ಕೆ ರಜೆಯಿತ್ತು. ಹಾಗಾಗಿ ಇತರ ತರಬೇತುದಾರರು ಯಾರೂ ಬಂದಿರಲಿಲ್ಲ. ಕಾವಲು ಸಿಬಂದಿ ಮತ್ತು ಸ್ವಚ್ಛತಾ ಸಿಬಂದಿ ಮಾತ್ರ ಈಜುಕೊಳ ಸಂಕೀರ್ಣದಲ್ಲಿದ್ದರು. ಬೆಳಗ್ಗೆ ಬೇಗ ಈಜುಕೊಳಕ್ಕೆ ಬಂದಿದ್ದ ಚಂದ್ರಶೇಖರ್ ಅವರು ನಿರ್ವಹಣ ಸಿಬ್ಬಂದಿ ಬರುವ ವರೆಗೆ ಈಜಾಡಲು ನಿರ್ಧರಿಸಿ ಕೊಳಕ್ಕೆ ಇಳಿದಿದ್ದರು.
ಸ್ವಲ್ಪ ಹೊತ್ತು ಈಜಾಡಿದ ಬಳಿಕ ನೀರಿನಡಿಯಲ್ಲಿ ಈಜುವ ಉದ್ದೇಶದಿಂದ ಕಾವಲು ಸಿಬಂದಿಯ ಬಳಿ ಟೈಮರ್ ಕೊಟ್ಟು ನೀರೊಳಗೆ ಈಜಲಾರಂಭಿಸಿದ್ದರು.
50 ಮೀ. ಉದ್ದದ ಈಜುಕೊಳ ‘ಅದಾಗಿದ್ದು, ಇನ್ನೊಂದು ತುದಿಗೆ ತಲುಪಿದ ಅವರು ಮೇಲಕ್ಕೆ ಬಂದಿಲ್ಲ. ಇದರಿಂದ ಆತಂಕಗೊಂಡ ಕಾವಲು ಸಿಬ್ಬಂದಿ ನೀರಿಗೆ ಇಳಿದು ಪರಿಶೀಲಿಸಿದಾಗ ಸ್ಪಂದಿಸಿಲ್ಲ. ತತ್‌ಕ್ಷಣ ಮೇಲಕ್ಕೆ ತಂದು ಆಸ್ಪತ್ರೆಗೆ ಸಾಗಿಸಲಾಯಿತು. ಪರೀಕ್ಷಿಸಿದ ವೈದ್ಯರು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.
ಬಂಟ್ವಾಳದ ಮಾಣಿ ಬಳಿಯ ಸೂರಿಕುಮೇರು ಮೂಲದವರಾಗಿದ್ದು, ಮಂಗಳೂರಿನ ಕುದ್ರೋಳಿ ಬಳಿ ವಾಸವಾಗಿದ್ದರು. ಬರ್ಕೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಂಟ್ವಾಳದ ಮಾಣಿ ಬಳಿಯ ಸೂರಿಕುಮೇರು ಮೂಲದವರಾಗಿದ್ದು, ಮಂಗಳೂರಿನ ಕುದ್ರೋಳಿ ಬಳಿ ವಾಸವಾಗಿದ್ದರು. ಬರ್ಕೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.