Latest

ಟಿಕ್ ಟಾಕ್ ತಾರೆ ಮೇಘಾ ಠಾಕೂರ್ ಹಠಾತ್ ನಿಧನ

ಪ್ರಗತಿವಾಹಿನಿ ಸುದ್ದಿ, ಹೊಸದಿಲ್ಲಿ: ಟಿಕ್‌ಟಾಕ್ ತಾರೆ ಮೇಘಾ ಠಾಕೂರ್ (21) ಕೆನಡಾದಲ್ಲಿ ನಿಧನರಾದರು.

ಹೃದಯಾಘಾತಕ್ಕೆ ಒಳಗಾದ ನಾಲ್ಕು ತಿಂಗಳ ನಂತರ ಅವರು ನವೆಂಬರ್‌ 24ರಂದು ಬೆಳಗಿನ ಜಾವ  ಹಠಾತ್ ಸಾವಿನೊಂದಿಗೆ ತಮ್ಮ ಕುಟುಂಬ, ಸ್ನೇಹಿತರು ಮತ್ತು ಸಾಮಾಜಿಕ ಮಾಧ್ಯಮದ ಅನುಯಾಯಿಗಳನ್ನು ಆಘಾತಕ್ಕೊಳಪಡಿಸಿದ್ದಾರೆ.

Home add -Advt

“ಭಾರವಾದ ಹೃದಯದಿಂದ ನಾವು ಘೋಷಿಸುತ್ತೇವೆ. ಇದ್ದಕ್ಕಿದ್ದಂತೆ ಮತ್ತು ಅನಿರೀಕ್ಷಿತವಾಗಿ ಅವರು ನಿಧನರಾದರು,” ಎಂದು ಆಕೆಯ ಪೋಷಕರು ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ನಲ್ಲಿ ಬರೆದಿದ್ದಾರೆ.

“ಮೇಘಾ ಆತ್ಮವಿಶ್ವಾಸ ಮತ್ತು ಸ್ವತಂತ್ರ ಯುವತಿಯಾಗಿದ್ದಳು. ಅವಳು ತನ್ನ ಅಭಿಮಾನಿಗಳನ್ನು ಪ್ರೀತಿಸುತ್ತಿದ್ದಳು. ಅವಳ ನಿಧನದ ಬಗ್ಗೆ ನಿಮಗೆ ತಿಳಿಯಬೇಕೆಂದು ಬಯಸುತ್ತಿದ್ದಳು. ಈ ಸಮಯದಲ್ಲಿ, ನಾವು ಮೇಘಾಗೆ ನಿಮ್ಮ ಆಶೀರ್ವಾದವನ್ನು ಕೋರುತ್ತೇವೆ. ನಿಮ್ಮ ಆಲೋಚನೆಗಳು ಮತ್ತು ಪ್ರಾರ್ಥನೆಗಳು ಅವಳ ಮುಂದಿನ ಪ್ರಯಾಣದಲ್ಲಿ ಅವಳೊಂದಿಗೆ ಇರುತ್ತವೆ” ಎಂದು ಆಕೆಯ ಪೋಷಕರು ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

ಮೇಘಾ ಠಾಕೂರ್ ಒಂಟಾರಿಯೊದ ಬ್ರಾಂಪ್ಟನ್‌ನಲ್ಲಿ ವಾಸಿಸುತ್ತಿದ್ದರು, ದೇಹದ ಸಕಾರಾತ್ಮಕತೆ ಮತ್ತು ಆತ್ಮವಿಶ್ವಾಸದ ಕುರಿತ ವಿಡಿಯೊಗಳಿಂದಾಗಿ ಟಿಕ್‌ಟಾಕ್‌ನಲ್ಲಿ 9 ಲಕ್ಷಕ್ಕೂ ಹೆಚ್ಚು ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ 1 ಲಕ್ಷಕ್ಕೂ ಹೆಚ್ಚು ಅನುಯಾಯಿಗಳನ್ನು ಹೊಂದಿದ್ದರು.

7ನೇ ವೇತನ ಆಯೋಗಕ್ಕೆ ಸಿಕ್ಕಿತು ಕಚೇರಿ; 44 ಸಿಬ್ಬಂದಿಯೊಂದಿಗೆ ಕಾರ್ಯಾರಂಭ

 

Related Articles

Back to top button