Belagavi NewsBelgaum NewsKannada NewsKarnataka News
ಮಹಿಳೆ ನಾಪತ್ತೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಬೆಳಗಾವಿಯ ರಾಯಬಾಗ ತಾಲೂಕಿನ ಹಾರೂಗೇರಿ ಪಾಲಭಾವಿ ಗ್ರಾಮದ ರೂಪಾ ತಂದೆ ಪರಶುರಾಮ ಹೊಳೆಪ್ಪಗೋಳ (೨೧) ಎಂಬವಳು ಬೆಳಗ್ಗೆ ೬ ಗಂಟೆಗೆ ಶೌಚಕ್ಕೆ ಹೋಗಿ ಬರುತ್ತೇನೆ ಅಂತಾ ಹೇಳಿ ಪಾಲಭಾವಿ ಗ್ರಾಮದ ಮಹಿಳೆ ಮನೆಯಿಂದ ಹೋದವಳು ವಾಪಸ ಮನೆಗೆ ಬಾರದೆ ಕಾಣೆಯಾಗಿದ್ದು, ಮಗಳನ್ನು ಹುಡುಕಿ ಕೋಡಲು ತಂದೆ ಪರಸಪ್ಪ ಶಿವಪ್ಪ ಹೊಳೆಪ್ಪಗೋಳ (೪೪) ಇವರು ಫೆ. ೫ ರಂದು ಹಾರೂಗೇರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಕಾಣೆಯಾದ ಮಹಿಳೆಯ ವಿವರ:
ವಯಸ್ಸು ೨೧ ವರ್ಷ, ಉದ್ಯೋಗ ಮನೆಗೆಲಸ, ಎತ್ತರ ೪ ಪೂಟ ೫ ಇಂಚು, ಮೈಯಿಂದ ತೆಳಗೆ ಮೈಕಟ್ಟು, ಗೋದಿ ಮೈಬಣ್ಣ, ಕೋಲು ಮುಖ, ನೀಲಿ ಬಣ್ಣದ ಟಾಪ್ ಮತ್ತು ಬಿಳಿ ನೀಲಿ ಬಣ್ಣದ ಪ್ಯಾಂಟ್ ಧರಿಸಿಳುತ್ತಾಳೆ. ಕನ್ನಡ ಮಾತನಾಡಲು ಬರೆಯಲು ಬರುತ್ತದೆ. ಮಹಿಳೆ ಬಗ್ಗೆ ಮಾಹಿತಿ ದೊರೆತಲ್ಲಿ ರಾಯಬಾಗ ತಾಲೂಕಿನ ಹಾರೂಗೇರಿ ಠಾಣೆಗೆ ಸಂಪರ್ಕಿಸಬೇಕು ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.



