Latest

ಕದಲದ ಆನೆ ಮೇಲೆ ಕುಳಿತು ಅಭ್ಯರ್ಥಿ ಚುನಾವಣಾ ಕದನ

ಪ್ರಗತಿವಾಹಿನಿ ಸುದ್ದಿ, ಚಾಮರಾಜನಗರ: ಚುನಾವಣೆ ಸಮೀಪಿಸುತ್ತಿದ್ದಂತೆ ಮತದಾರರನ್ನು ಸೆಳೆಯಲು ಪ್ರಚಾರದ ನಾನಾ ವೈಖರಿಗಳು ಹುಟ್ಟಿಕೊಳ್ಳುತ್ತಿವೆ. ಶತಾಯಗತಾಯ ಜನಮನ ಗೆಲ್ಲಲು ಎಲ್ಲಿಲ್ಲದ ಬಗೆಗಳ ಅನ್ವೇಷಣೆಗೆ ಅಭ್ಯರ್ಥಿಗಳು ಇಳಿದಿದ್ದಾರೆ.

ಚಾಮರಾಜನಗರ ಬಿ.ಎಸ್.ಪಿ. ಅಭ್ಯರ್ಥಿ ಹ.ರಾ. ಮಹೇಶ ಕೂಡ ಹೊಸದೊಂದು ಐಡಿಯಾ ಹ್ಯಾಚ್ ಮಾಡಿದ್ದಾರೆ. ಬಿ.ಎಸ್.ಪಿ. ಚಿನ್ಹೆ ಆನೆಯಾಗಿದ್ದು ಜೀವಂತ ಆನೆ ಬಳಸಲಾಗದ ಅವರು 15 ಅಡಿ ಎತ್ತರದ ಕೃತಕ ಆನೆಯೊಂದನ್ನು ಬಳಸುತ್ತಿದ್ದು ಅದರ ಮೇಲೆ ಕುಳಿತು ಪ್ರಚಾರ ಆರಂಭಿಸಿದ್ದಾರೆ.

Home add -Advt

ಆನೆ ಕದಲದಿದ್ದರೂ ಅದನ್ನು ಹೊತ್ತ ವಾಹನ ಎಲ್ಲೆಡೆ ಸುತ್ತತೊಡಗಿದೆ. ಸೊಂಡಿಲ ಮೇಲೆ “Vote for BSP’ ಎಂದು ಬರೆದಿರುವ ಈ ಆನೆ ನೋಡಿಯೇ ಜನ ಅಲ್ಲಲ್ಲಿ ನಿಂತು ಕುತೂಹಲದಿಂದ ವೀಕ್ಷಿಸುತ್ತಿದ್ದಾರೆ. ಇದೇ ವೇಳೆ ಅಭ್ಯರ್ಥಿ ಭಾಷಣದ ಆಲಿಕೆಯೂ ಆಗುತ್ತಿದೆ.

ಸದ್ಯ ಜನಮತವೇನೇ ಇದ್ದರೂ ಜಂಬೂ ರಥ ಮಾತ್ರ ಜನಮನ ಗೆಲ್ಲುತ್ತಿರುವುದು ನಿಜ.

https://pragati.taskdun.com/sivamogga-central-jailprisonersuicide/
https://pragati.taskdun.com/m-b-patil-sparks-against-mla-basanagouda-patil-yatnal/
https://pragati.taskdun.com/the-price-of-gold-decreased-buying-jewelery-is-auspicious/

Related Articles

Back to top button