Latest

ಬಾಗಲಕೋಟ ವಿವಿಯಲ್ಲಿ ಡಾ. ಅಂಬೇಡ್ಕರ್ ಜಯಂತಿ ಆಚರಣೆ

ಪ್ರಗತಿವಾಹಿನಿ ಸುದ್ದಿ, ಜಮಖಂಡಿ: ಬಾಗಲಕೋಟ ವಿಶ್ವವಿದ್ಯಾಲಯದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ 132ನೇ ಜಯಂತಿ ಆಚರಿಸಲಾಯಿತು.

“ಈಗಿನ ರಾಜಕೀಯ ಶಿಷ್ಟಾಚಾರ ಮತ್ತು ಭಾರತದ ಆರ್ಥಿಕ ವ್ಯವಸ್ಥೆಗೆ ಭದ್ರ ಬುನಾದಿ ಹಾಕಿದ ಮಹಾನ್ ನಾಯಕ ಡಾ.ಬಿ.ಆರ್.ಅಂಬೇಡ್ಕರ್. ಬಡ ಕುಟುಂಬದಲ್ಲಿ ಜನಿಸಿದರೂ ವಿದ್ಯಾರ್ಜನೆಯಲ್ಲಿ ಶ್ರೀಮಂತಿಕೆ ಮೆರೆದವರು ಅವರು. ಯಾವುದೇ ವ್ಯಕ್ತಿ ಜೀವನದಲ್ಲಿ ಅತಗಯುನ್ನತ ಸ್ಥಾನಕ್ಕೆ ತಲುಪಬೇಕಾದರೆ ತಂದೆ- ತಾಯಿ, ಗುರುವಿನ ಪಾತ್ರ ಬಹುಮುಖ್ಯ. ಡಾ. ಅಂಬೇಡ್ಕರ್ ಅವರ ಅವರ ಬಾಲ್ಯದಲ್ಲಿ ಮೌಲ್ಯಯುತ ಶಿಕ್ಷಣವನ್ನು ಅವರ ಗುರುಗಳು ನೀಡಿದ್ದರು. ಡಾ.ಅಂಬೇಡ್ಕರ್ ಭಾರತ ಕಂಡ ಅತ್ಯುನ್ನತ ಅರ್ಥಶಾಸ್ತ್ರಜ್ಞರು” ಎಂದು ಕುಲಪತಿ ಆನಂದ ದೇಶಪಾಂಡೆ ಹೇಳಿದರು.

ಸಂಯೋಜಕ ಮಲ್ಲಿಕಾರ್ಜುನ ಮರಡಿ ಪ್ರಾಸ್ತಾವಿಕ ಮಾತನಾಡಿದರು. ಡಾ.ದಯಾನಂದ ಹುಡೇದ ನಿರೂಪಿಸಿ ವಂದಿಸಿದರು. ವಿದ್ಯಾರ್ಥಿಗಳು, ಬೋಧಕ- ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.

https://pragati.taskdun.com/vidhanasabha-electioncongress-candidate3rd-list/
https://pragati.taskdun.com/dissent-will-be-settled-in-two-days-cm-bommai/
https://pragati.taskdun.com/eagle-eye-on-election-frauds-strict-checking-at-check-posts/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button