Belagavi NewsBelgaum NewsKannada NewsKarnataka NewsLatest

*ಅನೈತಿಕ ಸಂಬಂಧದ ಸಂಶಯ; ಭಾವನನ್ನೇ ಹತ್ಯೆಗೈದ ಭಾಮೈದ*

ಪ್ರಗತಿವಾಹಿನಿ ಸುದ್ದಿ; ಚಿಕ್ಕೋಡಿ; ಪತ್ನಿಯ ಜೊತೆ ತನ್ನ ಸಹೋದರಿಯ ಪತಿ ಅಕ್ರಮ ಸಂಬಂಧ ಹೊಂದಿದ್ದಾನೆ ಎಂಬ ಸಂಶಯಕ್ಕೆ ಭಾವನನ್ನೇ ಕತ್ತು ಕೊಯ್ದು ಕೊಲೆ ಮಾಡಿರುವ ಘಟನೆ ಚಿಕ್ಕೋಡಿ ಪಟ್ಟಣದ ವಿದ್ಯಾನಗರದ ಹತ್ತಿರ ಗಣೇಶ ನಗರದಲ್ಲಿ ನಡೆದಿದೆ.

Home add -Advt

ಜೈನಾಪುರ ಗ್ರಾಮದ ಮಾಜಿ ಸೈನಿಕ ಹಾಗೂ ಕ್ರಶರ್ ಮಾಲೀಕ ಈರಗೌಡ ಶಿವಪುತ್ರ ಟೋಪ್ಪಗೋಳ(45) ಮೃತ ದುರ್ದೈವಿ. ಚಿಕ್ಕೋಡಿ ಪಟ್ಟಣದ ಗಣೇಶ್ ನಗರದ ಮನೆಯಲ್ಲಿಯೇ ಹತ್ಯೆಗೈಯ್ಯಲಾಗಿದೆ. ಸಂಜಯ ಭಾಕರೆ ಭಾವನನ್ನೇ ಕೊಂದ ಆರೋಪಿ.

ತನ್ನ ಪತ್ನಿ ಜೊತೆ ಸಹೋದರಿಯ ಪತಿ ಅನೈತಿಕ ಸಂಬಂಧ ಹೊಂದಿದ್ದಾನೆ ಎಂಬ ಸಂಶಯದಲ್ಲಿ ಸಂಜಯ ತನ್ನ ಭಾವನನ್ನೇ ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೂಲತಃ ಜೈನಾಪುರ ಗ್ರಾಮದವರಾದ ಮಾಜಿ ಸೈನಿಕ ಈರಗೌಡ ಇವರು ಚಿಕ್ಕೋಡಿಯಲ್ಲಿ ಮನೆ ಕಟ್ಟಿಕೊಂಡು ತನ್ನ ಪತ್ನಿ, ಮಕ್ಕಳ ಜೊತೆ ವಾಸವಾಗಿದ್ದರು. ನಗರದ ಗಣಪತಿ ಮಂಡಳದ ಅಧ್ಯಕ್ಷರಾಗಿದ್ದರು.

ಚಿಕ್ಕೋಡಿ ಪೋಲಿಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ. ಸ್ಥಳಕ್ಕೆ ಸಿಪಿಐ ವಿಶ್ವನಾಥ ಚೌಗಲಾ ಹಾಗೂ ಪಿಎಸ್ ಐ ಬಸನಗೌಡ ನೇರ್ಲಿ ಭೇಟಿ ನೀಡಿ ಪರೀಶೀಲನೆ ನಡೆಸಿದರು.

Related Articles

Back to top button