Kannada NewsKarnataka NewsNationalPolitics
*ಆರ್ ಎಸ್ ಎಸ್ ಪ್ರಮುಖ ತುಷಾರ್ ಬಾಳೇಕುಂದ್ರಿ ನಿಧನ*

ಪ್ರಗತಿವಾಹಿನಿ ಸುದ್ದಿ: ಆರ್ ಎಸ್ ಎಸ್ ಬೆಳಗಾವಿ ವಿಭಾಗದ ಶಾಖಾ ಪ್ರಮುಖ ತುಷಾರ ಬಾಳೇಕುಂದ್ರಿ ಅವರು ಇಂದು ನಿಧನ ಹೊಂದಿದ್ದು, ಅವರ ನಿಧನಕ್ಕೆ ಅನೇಕರು ಸಂತಾಪ ಸೂಚಿಸಿದ್ದಾರೆ.
ತುಷಾರ ಬಾಳೇಕುಂದ್ರಿ ಅವರ ಅಂತಿಮ ಸಂಸ್ಕಾರವು ಇಂದು ಸಂಜೆ 4 ಗಂಟೆಗೆ ಪಂತ್ ಬಾಳೇಕುಂದ್ರಿಯಲ್ಲಿ ನಡೆದಿದೆ.
ತುಷಾರ ಬಾಳೇಕುಂದ್ರಿ ಅವರು ಒಬ್ಬ ಶಿಸ್ತಿನ ಸ್ವಯಂಸೇವಕ, ರಾಷ್ಟ್ರ ಭಕ್ತ. ಅವರ ಅಗಲಿಕೆಯ ನೋವನ್ನು ಭರಿಸುವ ಶಕ್ತಿಯನ್ನು ಭಗವಂತ ಅವರ ಕುಟುಂಬ ಹಾಗೂ ಸ್ನೇಹಿತ ವರ್ಗಕ್ಕೆ ಕರುಣಿಸಲಿ ಎಂದು ಬಿಜೆಪಿ ಮುಖಂಡ ಮಹಾಂತೇಶ ವಕ್ಕುಂದ ಅವರು ಸಂತಾಪ ಸೂಚಿಸಿದ್ದಾರೆ.



