Latest

ಮೊಮ್ಮಕ್ಕಳೊಂದಿಗೆ ಗೋವಾಕ್ಕೆ ತೆರಳಿದ್ದ ಕುಟುಂಬ ಬಲಿ

ಪ್ರಗತಿವಾಹಿನಿ ಸುದ್ದಿ, ಖಾನಾಪುರ:

ತಾಲ್ಲೂಕಿನ ಹೆಬ್ಬಾಳ ಗ್ರಾಮದ ಬಳಿ ಬೆಳಗಾವಿ ತಾಳಗುಪ್ಪ ರಾಜ್ಯ ಹೆದ್ದಾರಿಯಲ್ಲಿ ಪ್ರಯಾಣಿಕರ ಕಾರು ಮತ್ತು ಲಾರಿಗಳ ನಡುವೆ ಗುರುವಾರ ಸಂಜೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಒಂದೇ ಕುಟುಂಬದ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

Home add -Advt

ಖಾನಾಪುರ ಬಳಿ ಭೀಕರ ಅಪಘಾತ: ಬೆಂಗಳೂರಿನ ಮೂವರ ಸಾವು
ಬೆಂಗಳೂರಿನ ನಾಗೇನಹಳ್ಳಿ ನಿವಾಸಿ ಬಿ.ಎಸ್ ಬಾಬಯ್ಯ (66), ಅವರ ಸೊಸೆ ಅಜೀರಾಬಿ (33) ಮತ್ತು ಮೊಮ್ಮಗ ಜಯಾದ ಅಬ್ಬಾಸ್ (4)  ಮೃತರಾದವರು. 
ಕಾರು ಚಲಾಯಿಸುತ್ತಿದ್ದ ಬಿ.ಎಸ್. ಬಾಬಯ್ಯ ಅವರ ಪುತ್ರ ಜಹೀರ್ ಅಬ್ಬಾಸ್ (38), ಬಾಬಯ್ಯ ಅವರ ಪತ್ನಿ ಚಾಂದಬೀಬೀ (63) ಮತ್ತು ಮೊಮ್ಮಗ ಜುನೇದ ಅಹ್ಮದ (8) ಅಪಘಾತದಲ್ಲಿ ಗಾಯಗೊಂಡಿದ್ದಾರೆೆ. ಜಹೀರ್ ಅಬ್ಬಾಸ್ ಮತ್ತು ಚಾಂದಬೀಬೀ ಅವರ ಸ್ಥಿತಿ ಚಿಂತಾಜನಕವಾಗಿದೆ. 
ಬೆಂಗಳೂರಿನ ಬಿ.ಎಸ್ ಬಾಬಯ್ಯ ತಮ್ಮ ಪತ್ನಿ, ಮಗ, ಸೊಸೆ ಮತ್ತು ಇಬ್ಬರು ಮೊಮ್ಮಕ್ಕಳೊಂದಿಗೆ ಮೂರು ದಿನಗಳ ಹಿಂದೆ ಕಾರಿನಲ್ಲಿ ಗೋವಾಕ್ಕೆ ತೆರಳಿದ್ದರು. ಗುರುವಾರ ಮಧ್ಯಾಹ್ನ ಗೋವಾದಿಂದ ಬೆಂಗಳೂರಿನತ್ತ ಹೊರಟಿದ್ದ ಅವರು ಪ್ರಯಾಣಿಸುತ್ತಿದ್ದ ಕಾರು ತಾಲ್ಲೂಕಿನ ಹೆಬ್ಬಾಳ ಬಳಿ ಎದುರಿನಿಂದ ಬಂದ ಲಾರಿಗೆ ಅಪ್ಪಳಿಸಿದೆ.

ಅಪಘಾತದ ರಭಸಕ್ಕೆ ಬಾಬಯ್ಯ, ಅಜೀರಾಬಿ ಮತ್ತು ಜಯಾದ ಅಬ್ಬಾಸ್ ಸ್ಥಳದಲ್ಲೇ ಮೃತಪಟ್ಟರೆ, ಚಾಲಕ ಜಹೀರ ಮತ್ತು ಚಾಂದಬೀಬೀ ಗಂಭೀರವಾಗಿ ಗಾಯಗೊಂಡು ಬೆಳಗಾವಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಚಾಲಕ ಜಹೀರ ಪುತ್ರ ಜುನೇದ ಅಹ್ಮದ್ ಕಾಲಿಗೆ ಪೆಟ್ಟಾಗಿದೆ.
ಈತನಿಗೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎಂದು ವೈದ್ಯರು ಪ್ರಗತಿವಾಹಿನಿಗೆ ತಿಳಿಸಿದ್ದಾರೆ.
ಅಪಘಾತದ ಸುದ್ದಿ ತಿಳಿದ ಕೂಡಲೇ ಘಟನಾ ಸ್ಥಳದಲ್ಲಿ ಸೇರಿದ ಹೆಬ್ಬಾಳ ಗ್ರಾಮಸ್ಥರು ಗಾಯಾಳುಗಳನ್ನು ಮತ್ತು ಮೃತರನ್ನು ಕಾರಿನಿಂದ ತೆಗೆದು ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಸಾಗಿಸಿದ್ದಾರೆ. ಘಟನಾ ಸ್ಥಳಕ್ಕೆ ಖಾನಾಪುರ ಸಿ.ಪಿ.ಐ ಮೋತಿಲಾಲ ಪವಾರ ಹಾಗೂ ನಂದಗಡ ಠಾಣೆಯ ಸಿಬ್ಬಂದಿ ಭೇಟಿ ನೀಡಿದ್ದಾರೆ. ನಂದಗಡ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Related Articles

Back to top button