Film & EntertainmentKannada NewsKarnataka NewsNational

*ಖ್ಯಾತ ಗಾಯಕಿ ಉಷಾ ಉತ್ತುಪ್‌ ಪತಿ ನಿಧನ*

ಪ್ರಗತಿವಾಹಿನಿ ಸುದ್ದಿ: ಖ್ಯಾತ ಗಾಯಕಿ, ಇಂಡಿಯನ್‌ ಪಾಪ್‌ ಐಕಾನ್‌ ಉಷಾ ಉತ್ತುಪ್‌ ಅವರ ಪತಿ ಹೃದಯಸ್ತಂಭನದಿಂದ ನಿಧನರಾಗಿದ್ದಾರೆ. 

Home add -Advt

ಸೋಮವಾರ(ಜು.8ರಂದು) ಕೋಲ್ಕತ್ತಾದಲ್ಲಿ ಜಾನಿ ಚಾಕೋ ಉತ್ತುಪ್ (78) ನಿಧನ ಹೊಂದಿದ್ದಾರೆ. ತನ್ನ ನಿವಾಸದಲ್ಲಿ ಟಿವಿ ನೋಡುತ್ತಿರುವ ವೇಳೆ ಏಕಾಏಕಿ ಕುಸಿದು ಬಿದ್ದ ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಆದರೆ ಅದಾಗಲೇ ಅವರು ಮೃತಪಟ್ಟಿರುವುದಾಗಿ ವೈದ್ಯರು ಹೇಳಿದ್ದಾರೆ. 

ಉಷಾ ಅವರಿಗೆ ಜಾನಿ ಚಾಕೋ ಎರಡನೇ ಪತಿ. 70ರ ದಶಕದಲ್ಲಿ ಉಷಾ ಮೊದಲ ಬಾರಿ ರೆಸ್ಟೋರೆಂಟ್‌ ವೊಂದರಲ್ಲಿ ಕಾರ್ಯಕ್ರಮದ ವೇಳೆ ಜಾನಿ ಅವರನ್ನು ಭೇಟಿ ಆಗಿದ್ದರು. ಉಷಾ ಈ ಹಿಂದೆ ರಾಮು ಅವರನ್ನು ಮದುವೆಯಾಗಿದ್ದರು. ಉಷಾ – ಜಾನಿ ದಂಪತಿಗೆ ಸನ್ನಿ ಎಂಬ ಮಗ ಮತ್ತು ಅಂಜಲಿ ಎಂಬ ಮಗಳಿದ್ದಾರೆ.

ಇಂದೆ (ಜು.9ರಂದು) ಜಾನಿ ಅವರ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.

ಸಂಗೀತ ಲೋಕದಲ್ಲಿನ ಅಪಾರ ಸಾಧನೆಗಾಗಿ ಉಷಾ ಉತ್ತುಪ್‌ ಅವರಿಗೆ ಈ ವರ್ಷದ ಆರಂಭದಲ್ಲಿ ಪದ್ಮಭೂಷಣ ನೀಡಿ ಗೌರವಿಸಲಾಗಿತ್ತು.

Related Articles

Back to top button