Belagavi NewsBelgaum NewsKannada NewsKarnataka NewsLatest

*ಬೆಳಗಾವಿಯಲ್ಲಿ ಲಾಕ್ಡ್ ಹೌಸ್ ಬೀಟ್ ಸಿಸ್ಟಮ್ ಆರಂಭ*

ಏನಿದು ನೂತನ ಸುರಕ್ಷತಾ ವ್ಯವಸ್ಥೆ?

ಪ್ರಗತಿವಾಹಿನಿ ಸುದ್ದಿ: ಲಾಕ್ಡ್ ಹೌಸ್ ಬೀಟ್ ಸಿಸ್ಟಮ್ ಎಂಬ ನೂತನ ಸುರಕ್ಷತಾ ವ್ಯವಸ್ಥೆಯನ್ನು ಬೆಳಗಾವಿ ನಗರ ಪೊಲೀಸರು ಲೋಕಾರ್ಪಣೆಗೊಳಿದ್ದಾರೆ. ಏನಿದು ಲಾಕ್ಡ್ ಹೌಸ್ ಸಿಸ್ಟಮ್? ಇಲ್ಲಿದೆ ಮಾಹಿತಿ.

Home add -Advt

ನಗರದಿಂದ ಹೊರಡುವ ಯಾವುದೇ ವ್ಯಕ್ತಿ ತಮ್ಮ ವಿಳಾಸ, ಸ್ಥಳ ಪಿನ್ ಮತ್ತು ಗೈರುಹಾಜರಿಯ ಅವಧಿಯನ್ನು ನಗರ ಪೊಲೀಸ್ ನಿಯಂತ್ರಣ ಕೊಠಡಿಗೆ ನೀಡಿರುವ ಸಂಖ್ಯೆಗೆ ವಾಟ್ಸಾಪ್ ಮೂಲಕ ಕಳುಹಿಸಬಹುದು.

ಕಂಟ್ರೋಲ್ ರೂಂ: 8277951146 ಸಂಖ್ಯೆಗೆ ವಾಟ್ಸಪ್ ಮೂಲಕ ಮಾಹಿತಿ ಕಳುಹಿಸಬಹುದು. ಡೇಟಾವನ್ನು ಗೌಪ್ಯವಾಗಿಡಲಾಗುತ್ತದೆ ಮತ್ತು ಆ ಪ್ರದೇಶದ ಬೀಟ್ ಸಿಬ್ಬಂದಿಗೆ ಮಾತ್ರ ರಾತ್ರಿ ಕರ್ತವ್ಯದ ಬಗ್ಗೆ ಮಾಹಿತಿ ನೀಡಲಾಗುತ್ತದೆ.

ರಾತ್ರಿ ಕರ್ತವ್ಯದ ಸಿಬ್ಬಂದಿ ನಸುಕಿನ ಜಾವ 1 ರಿಂದ ಬೆಳಿಗ್ಗೆ 5 ಗಂಟೆಯ ನಡುವೆ ಕನಿಷ್ಠ ಎರಡು ಬಾರಿ ನಿಮ್ಮ ಮನೆಗಳಿಗೆ ಭೇಟಿ ನೀಡಿ ಪರಿಶೀಲಿಸುತ್ತಾರೆ. ಈ ಅವಧಿ ಕಳ್ಳತನ ಪ್ರಕರಣಗಳು ನಡೆಯುವ ಸಮಯ. ಈ ಹಿನ್ನೆಲೆಯಲ್ಲಿ ಲಾಕ್ ಆಗಿರುವ ಮನೆಗಳ ಮೇಲೆ ಪೊಲೀಸರು ನಿಗಾ ವಹಿಸಿ ಕಳ್ಳತನದಂತಹ ಪ್ರಕರಣ ನಡೆಯದಂತೆ ಎಚ್ಚರಿಕೆ ವಹಿಸುತ್ತಾರೆ.

ಈ ಮೂಲಕ ನಗರಗಳಲ್ಲಿ ಕಳ್ಳತನ ಪ್ರಕರಣಗಳನ್ನು ತಪ್ಪಿಸುವುದು ಪೊಲೀಸ್ ಇಲಾಖೆಯ ಹೊಸ ವ್ಯವಸ್ಥೆಯ ಕ್ರಮವಾಗಿದೆ.

ಬೆಳಗಾವಿ ಜಿಲ್ಲೆಯಲ್ಲಿ ಕಳ್ಳತನ, ದರೋಡೆ ಪ್ರಕರಣಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ಬೆನ್ನಲೇ ಪೊಲೀಸ್ ಇಲಾಖೆ ಲಾಕ್ಡ್ ಹೌಸ್ ಬೀಟ್ ಸಿಸ್ಟಮ್ ಆರಂಭಿಸಿದ್ದು, ಸಾರ್ವಜನಿಕರು ಈ ನೂತನ ಸುರಕ್ಷತಾ ವ್ಯವಸ್ಥೆಯ ಸದುಪಯೋಗ ಪಡಿಸಿಕೊಳ್ಳುವಂತೆ ತಿಳಿಸಲಾಗಿದೆ.

Related Articles

Back to top button