Belagavi NewsBelgaum NewsKannada NewsKarnataka News

*ಯುವಕ ಹಾಗೂ ಮಹಿಳೆ ನಾಪತ್ತೆ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಅಕ್ಕತಂಗಿಯರಹಾಳ ಗ್ರಾಮದ 26 ವರ್ಷ ವಯಸ್ಸಿನ ಪ್ರಭಾವತಿ ದುರ್ಗಪ್ಪಾ ದಳವಾಯಿ ಎಂಬ ಮಹಿಳೆ ಕೆಲಸಕ್ಕೆ ಎಂದು ನಗರದ ಶಹಾಪೂರ ಗ್ರಾಮದ ಹುಲಬತ್ತಿ ಕಾಲೋನಿಯಲ್ಲಿ ವಾಸವಾಗಿದ್ದು, ಕೆಲಸಕ್ಕೆ ಹೋಗುತ್ತೆನೆ ಎಂದು ಹೇಳಿ ಹೋದವಳು ಮರುಳಿ ಮನೆಗೆ ಬಾರದೆ ನಾಪತ್ತೆಯಾಗಿದ್ದಾರೆ.

ಈ ಬಗ್ಗೆ ಶಹಾಪೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಾಪತ್ತೆಯಾದ 26 ವರ್ಷ ವಯಸ್ಸಿನ ಮಹಿಳೆ 5 ಅಡಿ ಎತ್ತರ, ಕೋಲು ಮುಖ, ಗೋದಿಗಪ್ಪು ಮೈಬಣ್ಣ, ಗಿಡ್ಡ ಮೂಗು, ಬಲಗೈ ಮೇಲೆ ಎಸ್‌&ಪಿ ಅಂತಾ ಇಂಗ್ಲೀಷ್ ನಲ್ಲಿ ಟ್ಯಾಟೂ ಇದೆ. ಕನ್ನಡ, ಮರಾಠಿ ಭಾಷೆ ಮಾತನಾಡುತ್ತಾರೆ, ಕಪ್ಪು ಬಣ್ಣದ ಗೌನ್ ಧರಿಸಿದ್ದಾರೆ.

ಕಾಣಿಯಾದ ಮಹಿಳೆ ಕುರಿತು ಮಾಹಿತಿ ದೊರೆತಲ್ಲಿ ಶಹಾಪೂರ ಪೊಲೀಸ್ ಠಾಣೆಯ ಇನ್ಸಪೆಕ್ಟರ್ ಅಥವಾ ಶಹಾಪೂರ ಪೊಲೀಸ್ ಠಾಣೆಯ ದೂರವಾಣಿ ಸಂಖ್ಯೆ: 0831-2405244, 9480804046 ಅಥವಾ ನಗರ ಪೊಲೀಸ್ ಕಂಟ್ರೋಲ್ ರೂಮ್ : 0831-2405233 ಗೆ ಸಂಪರ್ಕಿಸಬಹುದಾಗಿದೆ ಎಂದು ‘ಹಾಪೂರ ಪೊಲೀಸ್ ಠಾಣೆಯ ಇನ್ಸಪೆಕ್ಟರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಯುವಕ ನಾಪತ್ತೆ

ಬೆಳಗಾವಿ ಜಿಲ್ಲೆಯ ಕಿತ್ತೂರ ತಾಲೂಕಿನ ಹೊಸ ಚನ್ನಾಪೂರ ಗ್ರಾಮದ 18 ವರ್ಷ ವಯಸ್ಸಿನ ವೀರಭದ್ರಯ್ಯ ರುದ್ರಯ್ಯ ಬೆಟಗೇರಿ ಎಂಬ ಯುವಕ ನಗರದ ವಡಗಾಂವ ಗ್ರಾಮದ ಚಾವಡಿ ಗಲ್ಲಿಯಲ್ಲಿ ವಾಸವಾಗಿದ್ದ. ಈತ ಯಾರಿಗೂ ಹೇಳದೆ ಮನೆಯಿಂದ ಹೋದವನು ಮರಳಿ ಮನೆಗೆ ವಾಪಸ್ ಆಗಿಲ್ಲ.

ಯುವಕ ನಾಪತ್ತೆಯಾಗಿದ್ದನೆಂದು ಶಹಾಪೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾಣಿಯಾದ 18 ವರ್ಷ ವಯಸ್ಸಿನ ಯುವಕ 5 ಅಡಿ ಎತ್ತರ, ಕೋಲು ಮುಖ, ಗೋದಿಗೆಂಪ್ಪು ಮೈಬಣ್ಣ, ಬಲಗೈ ಮಧ್ಯದ ಬೆರಳಿನ ಮೇಲೆ ಟ್ಯಾಟೂ ಮಾರ್ಕ್ ಇದ್ದು, ಕನ್ನಡ, ಇಂಗ್ಲಿಷ್ ಭಾಷೆ ಮಾತನಾಡುತ್ತಾನೆ. ಕಪ್ಪು ಬಣ್ಣದ ಹಾಫ್ ತೋಳಿನ ಟಿ-ಶರ್ಟ್, ಡ್ರೈ ಬಣ್ಣದ ಬರ್ಮೊಡಾ ಫ್ಯಾಂಟ್ ಧರಿಸಿರುತ್ತಾನೆ.

ಕಾಣಿಯಾದ ವ್ಯಕ್ತಿ ಕುರಿತು ಮಾಹಿತಿ ದೊರೆತಲ್ಲಿ ಶಹಾಪೂರ ಪೊಲೀಸ್ ಠಾಣೆಯ ಇನ್ಸಪೆಕ್ಟರ್ ಅಥವಾ ಶಹಾಪೂರ ಪೊಲೀಸ್ ಠಾಣೆಯ ದೂರವಾಣಿ ಸಂಖ್ಯೆ : 0831-2405244, 9480804046 ಅಥವಾ ನಗರ ಪೊಲೀಸ್ ಕಂಟ್ರೋಲ್ ರೂಮ್ : 0831-2405233 ಗೆ ಸಂಪರ್ಕಿಸಬಹುದಾಗಿದೆ ಎಂದು ಶಾಹಾಪೂರ ಪೊಲೀಸ್ ಠಾಣೆಯ ಇನ್ಸಪೆಕ್ಟರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button