Kannada NewsKarnataka News

ಉಡಾಳ್ ಕಂಪನಿ ಚಲನಚಿತ್ರ​ಕ್ಕೆ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಕ್ಲ್ಯಾಪ್ 

ಚಲನಚಿತ್ರಗಳು ಬೆಂಗಳೂರಿಗಷ್ಟೆ ಸೀಮಿತವಾಗದೆ ಉತ್ತರ ಕರ್ನಾಟಕಕ್ಕೂ ​ಬರಬೇಕು

​ಪ್ರಗತಿವಾಹಿನಿ ಸುದ್ದಿ, ಬೆಳಗಾವಿ –  ಶಿಂಧೊಳ್ಳಿ​ ​ ಇಂಡಾಲ ನಗರ​ ​ಶ್ರೀ ಗಣಪತಿ ದೇವಸ್ಥಾನ​ದಲ್ಲಿ​ ಭಾನುವಾರ​​ ​​ಉಡಾಳ್ ಕಂಪನಿ ಚಲನಚಿತ್ರ​ಕ್ಕೆ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಕ್ಲ್ಯಾಪ್ ಹಾಕುವ ಮೂಲಕ ಚಾಲನೆ ನೀಡಿದರು.
 
ಈ ಚಲನಚಿತ್ರಕ್ಕೆ ನಿರಂಜನ ಸ್ವಾಮಿಗಳು ನಿರ್ಮಾಪಕರಾಗಿದ್ದು, ನಿರ್ದೇಶನದ ಜವಾಬ್ದಾರಿಯನ್ನು ಸಂಜಯ ಎಚ್ ಅವರು ವಹಿಸಿಕೊಂಡಿದ್ದಾರೆ. ಸದ್ಯದಲ್ಲೇ ಚಲನಚಿತ್ರದ ಅಧಿಕೃತ ಶೂಟಿಂಗ್ ಪ್ರಾರಂಭವಾಗುತ್ತಿದ್ದು, ಸಂಪೂರ್ಣ ಶೂಟಿಂಗ್ ಉತ್ತರ ಕರ್ನಾಟಕದಲ್ಲೇ ನಡೆಯಲಿದೆ.
ಚಲನಚಿತ್ರಗಳು ಬೆಂಗಳೂರಿಗಷ್ಟೆ ಸೀಮಿತವಾಗದೆ ಉತ್ತರ ಕರ್ನಾಟಕಕ್ಕೂ ​ಬರಬೇಕು, ಉತ್ತರ ಕರ್ನಾಟಕದಲ್ಲಿ ಸಾಕಷ್ಟು ಜನ ಕಲಾವಿದರಿದ್ದು, ಅವಕಾಶಗಳು ಸಿಗದೇ ವಂಚಿತರಾಗುತ್ತಿದ್ದಾರೆ, ಇವತ್ತು ಅಂತಹ ಪ್ರತಿಭೆಗಳನ್ನು ಗುರುತಿಸಿ, ಉತ್ತರ ಕರ್ನಾಟಕವು ಕೂಡ ಯಾವ ಕ್ಷೇತ್ರದಲ್ಲಿಯೂ ಕಡಿಮೆ ಇಲ್ಲ ಎನ್ನುವುದನ್ನು ತೋರಿಸಿಕೊಡಬೇಕಿದೆ​ ಎಂದು ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಹೇಳಿದರು.
ಈ ಸಂದರ್ಭದಲ್ಲಿ ಗ್ರಾಮದ​ ಹಿರಿಯರು, ಸ್ಥಳೀಯ ಜನ ಪ್ರತಿನಿಧಿಗಳು, ಮಹಾಂತೇಶ​ ಮತ್ತಿಕೊಪ್ಪ, ಕೃಷ್ಣ ನಾಯ್ಕರ್, ರಂಜತ್ ತಿಗಡಿ, ಮಂಜು, ಅನಿಲ ಹುದಲಿ, ರವಿ, ಮಹಾಂತೇಶ ರಣಗಟ್ಟಿಮಠ, ಮಹೇಶ ಶಾಸ್ತ್ರಿ​, ಪ್ರವೀಣ ಕಣಗಲೆ, ಉಮೇಶ ಬಡಿಗೇರ, ಬಸವರಾಜ ಹಮ್ಮಿಣಿ, ಈರಣ್ಣ ಉಮ್ರಾಣಿ, ಬಸಪ್ಪ ಹುದಲಿ ಸೇರಿದಂತೆ ಅನೇಕ ಕಲಾವಿದರು ಉಪಸ್ಥಿತರಿದ್ದರು.
​ 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button