Kannada NewsKarnataka NewsLatest

ಖಾನಾಪುರ ತಾಲೂಕಿನಲ್ಲಿ ಮತ್ತೊಂದು ಶಾಲಾ ಗೋಡೆ ಕುಸಿತ

ಪ್ರಗತಿವಾಹಿನಿ ಸುದ್ದಿ, ಖಾನಾಪುರ: ತಾಲೂಕಿನ ಮುಡೇವಾಡಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಗೋಡೆ ಭಾನುವಾರ ರಾತ್ರಿ ಕುಸಿದಿದೆ.

Home add -Advt

ರಜಾ ದಿನವಾದ್ದರಿಂದ ಶಾಲಾ‌ ಗೋಡೆ ಕುಸಿದಿದ್ದರೂ ಯಾವುದೇ ಅನಾಹುತ ಸಂಭವಿಸಿಲ್ಲ. ಶನಿವಾರ ಗರ್ಲಗುಂಜಿ ಗ್ರಾಮದ ಶಾಲೆಯ ಗೋಡೆ ಕುಸಿದಿದ್ದು, ಭಾನುವಾರ ಮುಡೇವಾಡಿ ಗ್ರಾಮದ ಶಾಲೆಯ ಗೋಡೆ ಕುಸಿಯುವ ಮೂಲಕ ತಾಲೂಕಿನಲ್ಲಿ ಎರಡು ದಿನಗಳ ಅಂತರದಲ್ಲಿ ಎರಡು ಶಾಲಾ ಗೋಡೆಗಳು ಮಳೆಯ ಅಬ್ಬರಕ್ಕೆ ಆಹುತಿಯಾಗಿವೆ.

ಜುಲೈ 14ರವರೆಗೂ ಭಾರಿ ಮಳೆ ಮುನ್ಸೂಚನೆ; ರೆಡ್ ಅಲರ್ಟ್ ಘೋಷಣೆ

Related Articles

Back to top button