Latest

ಸಿಎಂ ಹೇಳಿದ ‘ಆ ಎರಡು’ ವಿಷಯಗಳ ಚರ್ಚೆ ಏನು?

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಇನ್ನೂ ಎರಡು ವಿಷಯಗಳ ಚರ್ಚೆ ಬಾಕಿ ಇವೆ. ಈ ನಡುವೆ ಬೆಳಿಗ್ಗೆ 11 ಗಂಟೆಗೆ ಶುಭಸುದ್ದಿ ಹೊರಬೀಳುತ್ತೆ. ತಕ್ಷಣವೇ ರಾಜಭವನಕ್ಕೆ ನೂತನ ಸಚಿವರ ಪಟ್ಟಿ ಕಳಿಸುತ್ತೇವೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ.

ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ಡಿಸಿಎಂ ಹಾಗೂ ಸಚಿವರ ಹೆಸರಿನೊಂದಿಗೇ ಪಟ್ಟಿ ಹೊರಬೀಳುತ್ತೆ. ಶುಭಸುದ್ದಿ 11ಗಂಟೆ ಆಸುಪಾಸಿನಲ್ಲಿ ಬರುತ್ತೆ. ಯಾವುದೇ ರೀತಿಯ ಗೊಂದಲಗಳೂ ಇಲ್ಲ. 10 ಗಂಟೆ ಬಳಿಕ ಎಲ್ಲರಿಗೂ ಹೇಳುತ್ತೇವೆ. ಎರಡು ವಿಷಯದ ಚರ್ಚೆ ಬಾಕಿ ಇದೆ ಎಂದಿದ್ದಾರೆ.

Home add -Advt

ಈ ನಿಟ್ಟಿನಲ್ಲಿ ಸಿಎಂ ಹೇಳಿದ ಆ ಎರಡು ವಿಷಯಗಳು ಯಾವುದು ಎಂಬ ಕುತೂಹಲ ಮೂಡಿದೆ. ಬಿ.ವೈ.ವಿಜಯೇಂದ್ರ ಸಂಪುಟಕ್ಕೆ ಸೇರಿಸಿಕೊಳ್ಳುವ ಗೊಂದಲವೇ? ಅಥವಾ ವಲಸಿಗರನ್ನು ಕೈಬಿಡುವ ವಿಚಾರವೇ ಎಂಬ ಚರ್ಚೆ ಆರಂಭವಾಗಿದೆ.

ಫೋನ್ ಕರೆ ಬಂದಿಲ್ಲ ಎಂದು ರಾಜಿನಾಮೆಗೆ ಮುಂದಾದ ಆನಂದ ಮಾಮನಿ

Related Articles

Back to top button