Kannada NewsKarnataka NewsLatest

*ಕೇರಳ ಪೊಲೀಸರು ರಾಜ್ಯದ ಪೊಲೀಸರನ್ನು ವಶಕ್ಕೆ ಪಡೆದ ಪ್ರಕರಣ; ಇನ್ಸ್ ಪೆಕ್ಟರ್ ಸೇರಿ ನಾಲ್ವರು ಸಸ್ಪೆಂಡ್*

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಸೈಬರ್ ಕ್ರೈಂ ಪ್ರಕರಣದ ತನಿಖೆಗೆ ಹೋಗಿದ್ದ ವೇಳೆ ಬೆಂಗಳೂರಿನ ವೈಟ್ ಫೀಲ್ಡ್ ಸಿಇಎನ್ ಠಾಣೆ ಪೊಲೀಸರನ್ನು ಕೇರಳ ಪೊಲೀಸರು ವಶಕ್ಕೆ ಪಡೆದಿರುವ ವಿಚಾರಕ್ಕೆ ಸಂಬಂಧಿಸಿದಂತೆ ಇನ್ಸ್ ಪೆಕ್ಟರ್ ಸೇರಿದಂತೆ ನಾಲ್ವರು ಪೊಲೀಸರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ.

ವೈಟ್ ಫೀಲ್ಡ್ ಠಾಣೆಯ ಇನ್ಸ್ ಪೆಕ್ಟರ್ ಶಿವಪ್ರಕಾಶ್, ಹೆಡ್ ಕಾನ್ಸ್ ಟೇಬಲ್ ಗಳಾದ ಶಿವಾನಿ, ವಿಜಯ್ ಕುಮಾರ್ ಹಾಗೂ ಕಾನ್ಸ್ ಟೇಬಲ್ ಸಂದೇಶ್ ಅಮಾನತುಗೊಂಡವರು.

ಘಟನೆ ಬಗ್ಗೆ ಎಸಿಪಿ ವರದಿ ಆಧರಿಸಿ ಪ್ರಕರಣದ ತನಿಖೆ ಕಾರ್ಯವಿಧಾನದಲ್ಲಿ ಲೋಪ ಹಿನ್ನೆಲೆಯಲ್ಲಿ ನಾಲ್ವರನ್ನು ಸಸ್ಪೆಂಡ್ ಮಾಡಿ ಬೆಂಗಳೂರು ನಗರ ಪೊಲೀಸ್ ಆಯುಕ್ತ ದಯಾನಂದ್ ಆದೇಶ ಹೊರಡಿಸಿದ್ದಾರೆ.


Related Articles

Back to top button