Belagavi NewsBelgaum NewsKannada NewsPolitics

*ಪಂಚಮಸಾಲಿ ಮಠಕ್ಕೆ ಬೀಗ*

ಪ್ರಗತಿವಾಹಿನಿ ಸುದ್ದಿ: ಬಸವ ಜಯಮೃತ್ಯುಂಜಯ ಸ್ವಾಮೀಜಿಯನ್ನು ಬಾಗಲಕೋಟೆಯ ಕೂಡಲಸಂಗಮ ಪಂಚಮಸಾಲಿ ಮಠದ ಪೀಠಾಧ್ಯಕ್ಷ ಸ್ಥಾನದಿಂದ ಉಚ್ಛಾಟನೆ ಮಾಡಿದ ಬಳಿಕ ಇದೀಗ ಮಠಕ್ಕೆ ಬೀಗ ಜಡಿಯಲಾಗಿದೆ.

ಭಾನುವಾರ ಪಂಚಮಸಾಲಿ ಟ್ರಸ್ಟ್ ನ ಕಾರ್ಯಕಾರಿಣಿ ಸಭೆ ನಡೆಸಲಾಗಿತ್ತು. ಈ ಸಭೆಯಲ್ಲಿ ಕೂಡಲಸಂಗಮ ಪಂಚಮಸಾಲಿ ಪೀಠಾಧ್ಯಕ್ಷ ಸ್ಥಾನದಿಂದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಅವರನ್ನು ಉಚ್ಛಾಟನೆ ಮಾಡಲಾಗಿತ್ತು.

Home add -Advt

ಬಸವ ಜಯಮೃತ್ಯುಂಜಯ ಸ್ವಾಮೀಜಿ ಸಿಡಿ ಎಲ್ಲೆಲ್ಲಿ ಹೋಗಿವೆ ಅವೆಲ್ಲವನ್ನೂ ಬೆಳಕಿಗೆ ತರುತ್ತೇವೆ. ಅಷ್ಟೇ ಅಲ್ಲ ಸ್ವಾಮೀಜಿ ಎಲ್ಲೆಲ್ಲಿ ಆಸ್ತಿ ಮಾಡಿದ್ದಾರೆ ಎಲ್ಲಾ ದಾಖಲೆಗಳನ್ನು ಹುಡುಕುತ್ತೇವೆ, ಇನ್ಮುಂದೆ ಅವರಿಗೆ ಹಾಗೂ ಈ ಪೀಠಕ್ಕೂ ಯಾವುದೇ ಸಂಬಂಧವಿಲ್ಲ. ಅವರಿಗೆ ಸ್ವಾಭಿಮಾನ, ಸಂಸ್ಕಾರವಿದ್ದರೆ ಈ ಮಠಕ್ಕೆ ಬಾರಬಾರದು ಎಂದು ಪಂಚಮಸಾಲಿ ಟ್ರಸ್ಟ್ ಅಧ್ಯಕ್ಷ ವಿಜಯಾನಂದ ಕಾಶಪ್ಪನವ‌ರ್ ತಿಳಿಸಿದ್ದಾರೆ.

Related Articles

Back to top button