Latest

ತಂದೆಯ ಚಿತೆಗೆ ಹಾರಿದ ಮಗಳು

ಪ್ರಗತಿವಾಹಿನಿ ಸುದ್ದಿ; ಜೈಪುರ: ದೇಶಾದ್ಯಂತ ಕೊರೊನಾ ಅಟ್ಟಹಾಸಕ್ಕೆ ಹಲವರು ಬಲಿಯಾಗುತ್ತಿದ್ದಾರೆ. ಕೊರೊನಾ ಸೋಂಕಿಗೆ ತಂದೆ ಸಾವನ್ನಪ್ಪಿದ ದು:ಖ ತಾಳಲಾರದೇ ಮಗಳೊಬ್ಬಳು ತಂದೆಯ ಚಿತೆಗೆ ಹಾರಿದ ಘಟನೆ ರಾಜಸ್ಥಾನದ ಬಾರ್ಮರ್ ಜಿಲ್ಲೆಯಲ್ಲಿ ನಡೆದಿದೆ.

ಕೊರೊನಾ ಸೋಂಕಿನಿಂದ 73 ವರ್ಷದ ದಾಮೋದರ್ ದಾಸ್ ಶಾರದಾ ಮೃತಪಟ್ಟಿದ್ದರು. ಅಂತ್ಯಕ್ರಿಯೆ ವೇಳೆ ಕಿರಿಯ ಮಗಳು ಸ್ಮಶಾನದ ಒಳಗೆ ಹೋಗಬೇಕು ಎಂದು ಪಟ್ಟುಹಿಡಿದಿದ್ದಾಳೆ. ಹಾಗಾಗಿ ಆಕೆಗೆ ಒಳಗೆ ಹೋಗಲು ಅವಕಾಶ ನಿದಲಾಗಿದೆ. ಈ ವೇಳೆ ತಂದೆಯ ಸುಡುವ ಚಿತೆಗೆ ಹಾರಿದ್ದಾಳೆ.

Related Articles
Home add -Advt

ತಕ್ಷಣ ಆಕೆಯನ್ನು ರಕ್ಷಿಸಿ ಬರ್ಮಾರ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಶೇ.70ರಷ್ಟು ದೇಹ ಸುಟ್ಟು ಕರಕಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ದೇಶಾದ್ಯಂತ ಲಾಕ್ ಡೌನ್ ಜಾರಿ?, ಕೇಂದ್ರ ಸಂಪುಟ ಸಭೆ ಇಂದು

Related Articles

Back to top button