Politics

*ಡಿ.ಕೆ.ಶಿವಕುಮಾರ್ ಬೇಜಾರಾಗಲು ನಾವೇನು ಅವರ ಆಸ್ತಿ ಬರೆಸಿಕೊಂಡಿದ್ದೇವಾ? ಸಚಿವ ಕೆ.ಎನ್.ರಾಜಣ್ಣ ಗರಂ*

ಪ್ರಗತಿವಾಹಿನಿ ಸುದ್ದಿ: ನಾವು ಡಿನ್ನರ್ ಮೀಟಿಂಗ್ ನಡೆಸಿದರೆ ಡಿಸಿಎಂ ಡಿ.ಕೆ.ಶಿವಕುಮಾರ್ ಬೇಜಾರಾಗಲು ನಾವೇನು ಅವರ ಆಸ್ತಿ ಬರೆಸಿಕೊಂಡಿದ್ದೇವಾ? ಎಂದು ಸಚಿವ ಕೆ.ಎನ್.ರಾಜಣ್ಣ ಗರಂ ಆಗಿದ್ದಾರೆ.

ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ರಾಜಣ್ಣ, ಮೊನ್ನೆಯಷ್ಟೇ ಸಚಿವರ ಮನೆಯಲ್ಲಿ ನಡೆದ ಒಂದು ಡಿನ್ನರ್ ಮೀಟಿಂಗ್ ನಿಂದ ಈಗಾಗಲೇ ಗೊಂದಲ ಸೃಷ್ಟಿಯಾಗಿದೆ. ಹೀಗಾಗಿ ಇದೇ ರೀತಿ ಗೊಂದಲಗಳು ಮುಂದುವರೆಯುವುದು ಬೇಡ ಎಂಬ ಕಾರಣಕ್ಕೆ ಹೈಕಮಾಂಡ್ ನಾಯಕರು ಗೃಹ ಸಚಿವ ಪರಮೇಶ್ವರ್ ನಿವಾಸದಲ್ಲಿ ಡಿನ್ನರ್ ಮೀಟಿಂಗ್ ಗೆ ಬೇಡ ಎಂದಿದ್ದಾರೆ. ಆ ಕಾರಣಕ್ಕೆ ಸದ್ಯಕ್ಕೆ ಡಿನ್ನರ್ ಮೀಟಿಂಗ್ ಕ್ಯಾನ್ಸಲ್ ಆಗಿದೆ ಅಷ್ಟೇ ಎಂದರು.

Home add -Advt

ಡಿನ್ನರ್ ಮೀಟಿಂಗ್ ವಿಚಾರವಾಗಿ ಡಿಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ಬೇಜಾರಾಗಿದೆಯೇ? ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ರಾಜಣ್ಣ, ಅವರನ್ನೇ ಕೇಳಬೇಕು. ಡಿ.ಕೆ.ಶಿವಕುಮಾರ್ ಗೆ ಬೇಜಾರಾಗಲು ನಾವೇನು ಅವರ ಆಸ್ತಿ ಬರೆಸಿಕೊಂಡಿದ್ದೇವಾ? ಇದೆಲ್ಲವೂ ಸುಮ್ಮನೇ ಎಂದರು.

ಎಸ್ ಸಿ, ಎಸ್ ಟಿ ಕೋಟಾದಡಿ ವಿದ್ಯಾರ್ಥಿಗಳು ಕಾಲೇಜಿನಲ್ಲಿ ಅಡ್ಮಿಷನ್ ಪಡೆದವರಿಗೆ ಸ್ಕಾಲರ್ ಶಿಪ್ ಇಲ್ಲ, ಹಾಸ್ಟೇಲ್ ಗಳೂ ಇಲ್ಲ. ಇಂತಹ ಹಲವಾರು ಸಮಸ್ಯೆಗಳಿವೆ. ಈ ಎಲ್ಲಾ ಸಮಸ್ಯೆಗಳನ್ನು ಚರ್ಚಿಸಲು ಸಭೆ ಕರೆದರೆ ಸಭೆಯನ್ನೇ ಮಾಡುವುದು ಬೇಡ ಎಂದರೆ ಹೇಗೆ? ಇವರೆಲ್ಲ ಎಸ್ ಸಿ ಎಸ್ ಟಿ ವಿರೋಧಿಗಳಾ? ಇದೆಲ್ಲ ಬಹಳ ದಿನ ನಡೆಯಲ್ಲ ಎಂದು ವಾಗ್ದಳಿ ನಡೆಸಿದರು.

Related Articles

Back to top button