Kannada NewsKarnataka NewsLatest

ಹುಬ್ಬಳ್ಳಿಯಿಂದ ದೆಹಲಿಗೆ ಸ್ಟಾರ್ ಫ್ಲೈಟ್

ಪ್ರಗತಿವಾಹಿನಿ ಸುದ್ದಿ, ಹುಬ್ಬಳ್ಳಿ- ಬಹು ಬೇಡಿಕೆಯ ಉತ್ತರ ಕರ್ನಾಟಕದಿಂದ ನವದೆಹಲಿಗೆ ವಿಮಾನ ಹಾರಾಟ ನವೆಂಬರ್ 6ರಿಂದ ಆರಂಭವಾಗಲಿದೆ. ಹುಬ್ಬಳ್ಳಿ -ಹಿಂಡಾನ್ (ದೆಹಲಿ) ಮಧ್ಯೆ ವಿಮಾನ ಪ್ರಯಾಣಿಸಲಿದೆ.

ಸ್ಟಾರ್ ಏರ್ ವೇಸ್ ಈ ವಿಮಾನ ಆರಂಭಿಸುತ್ತಿದೆ. ವಾರದಲ್ಲಿ 3 ದಿನ ಅಂದರೆ ಬುಧವಾರ , ಗುರುವಾರ ಮತ್ತು ಶನಿವಾರ ವಿಮಾನ ಹಾರಟ ನಡೆಯಲಿದೆ. ಬುಧವಾರ ಮತ್ತು ಗುರುವಾರ (ಶನಿವಾರ ಸಮಯ ಬದಲಾವಣೆಯಿಂದ) ಮಧ್ಯಾಹ್ನ 1.05ಕ್ಕೆ ಹುಬ್ಬಳ್ಳಿಯಿಂದ ಹೊರಟು 3.45ಕ್ಕೆ ದೆಹಲಿ ತಲುಪಲಿದೆ. ದೆಹಲಿಯಿಂದ 4.10ಕ್ಕೆ ಹೊರಟು ಸಂಜೆ 6.50ಕ್ಕೆ ಹುಬ್ಬಳ್ಳಿ ತಲುಪಲಿದೆ.

ಇಂದಿನಿಂದಲೇ ಬುಕ್ಕಿಂಗ್ ಆರಂಭಿಸಲಾಗಿದೆ. ಟಿಕೆಟ್ ದರ 3699 ರೂ ಇದೆ.

Related Articles

Back to top button