ಕೊರೊನಾ ವೈರಸ್: ದೇಶದ ಜನರಿಗೆ ಪ್ರಧಾನಿ ಸಂದೇಶ

ಪ್ರಗತಿವಾಹಿನಿ ಸುದ್ದಿ; ನವದೆಹಲಿ: ದಿನದಿಂದ ದಿನಕ್ಕೆ ಕೊರೊನಾ ವೈರಸ್ ಸೋಂಕು ಹೆಚ್ಚುತ್ತಿದ್ದು, ಭಾರತದಾಲ್ಲಿ 74 ಜನರಲ್ಲಿ ಸೋಂಕು ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ದೇಶದ ಜನರಲ್ಲಿ ಧೈರ್ಯ ತುಂಬಿದ್ದು, ಸೋಂಕಿನ ಬಗ್ಗೆ ಆತಂಕಕ್ಕೆ ಒಳಗಾಗಬಾರದು ಎಂದು ಮನವಿ ಮಾಡಿದ್ದಾರೆ.

ಈ ಕುರಿತು ಟ್ವೀಟ್​ ಮಾಡಿರುವ ಪ್ರಧಾನಿ, ಕೋವಿಡ್​-19 ನೊವೆಲ್​ ಕೊರೋನಾ ವೈರಸ್​ ಪರಿಸ್ಥಿತಿ ಬಗ್ಗೆ ಸರ್ಕಾರ ಜಾಗುರುಕತೆ ವಹಿಸಿದ್ದು, ಇದರ ನಿಯಂತ್ರಣಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಜನರ ರಕ್ಷಣೆಗಾಗಿ ಕೇಂದ್ರ, ರಾಜ್ಯ ಸಚಿವರು, ಅನೇಕ ಹಂತದ ಸುರಕ್ಷತಾ ಕ್ರಮ ಕೈಗೊಂಡಿದ್ದಾರೆ. ಹೊರ ದೇಶಗಳಿಗೆ ಪ್ರಯಾಣಿಸುವ ವೀಸಾವನ್ನು ಕೂಡ ರದ್ದು ಮಾಡಲಾಗಿದೆ ಎಂದರು.

Home add -Advt

ಸೋಂಕು ಹರಡದಂತೆ ಸರ್ಕಾರದಿಂದ ಜನರ ರಕ್ಷಣೆಗೆ ಕ್ರಮ ಕೈಗೊಳ್ಳಲಾಗುತ್ತಿದೆ. ಇದರ ಜನರು ಕೂಡ ಮುನ್ನೆಚ್ಚರಿಕೆ ವಹಿಸುವುದು ಅಗತ್ಯ. ವಿದೇಶ ಪ್ರಯಾಣಗಳನ್ನು ರದ್ದು ಮಾಡುವುದು ಒಳಿತು ಎಂದು ಸಲಹೆ ನೀಡಿದ್ದಾರೆ.

 

Related Articles

Back to top button