Kannada NewsKarnataka NewsLatest

ಸಾತಾರ ಬಳಿ ಅಪಘಾತಕ್ಕೆ ಧಾರವಾಡದ 7 ಜನ ಬಲಿ

ಸಾತಾರ ಬಳಿ ಅಪಘಾತಕ್ಕೆ ಧಾರವಾಡದ 7 ಜನ ಬಲಿ

ಪ್ರಗತಿವಾಹಿನಿ ಸುದ್ದಿ, ಮಾಂಜರಿ –
ಮಹಾರಾಷ್ಟ್ರದ ಸತಾರಾ ಬಳಿ ಪುಣೆ-ಬೆಂಗಳೂರು ಹೆದ್ದಾರಿಯಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಧಾರವಾಡ ಮೂಲ‌ದ ಒಂದೇ ಕುಟುಂಬದ ಏಳು ಜನ ಮೃತಪಟ್ಟಿದ್ದಾರೆ.

ಚಾಲಕನ ನಿಯಂತ್ರಣ ತಪ್ಪಿದ ಕಾರು ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಧಾರವಾಡ ನಿಜಾಮುದ್ದೀನ್ ಕಾಲನಿಯ ನಿಜಾಮುದ್ದೀನ‌ ಸೌದಾಗರ ಎಂಬುವವರ ಕುಟುಂಬಕ್ಕೆ ಸೇರಿದ ಇಬ್ಬರು ಮಕ್ಕಳು ಸೇರಿದಂತೆ ಆರು ಜನರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

Home add -Advt

ನಿಜಾಮುದ್ದೀನ‌ ಸೌದಾಗರ ಸೇರಿ ಇಬ್ಬರು ಪುರುಷರು, ಇಬ್ಬರು ಮಹಿಳೆಯರು, 4 ವರ್ಷದ ಬಾಲಕ ಮತ್ತು 5 ವರ್ಷದ ಬಾಲಕಿ ಸೇರಿ ಒಟ್ಟು ಏಳು ಜನರು ಕೊನೆಯುಸಿರೆಳೆದಿದ್ದಾರೆ. ಚಾಲಕನಿಗೆ ಗಂಭೀರ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ

ನಿಜಾಮುದ್ದೀನ್ ಸೌದಾಗರ (65), ಸಪೂರಾಬೇಗಂ ನಿಜಾಮುದ್ದೀನ್ ಸೌದಾಗರ ಪತ್ನಿ (58), ಮನ್ಸೂಬ್ ನಿಜಾಮುದ್ದೀನ್ ಸೌದಾಗರ ಮಗ (45), ನಫಿಸಾ ಮನ್ಸೂಬ್ ಸೌದಾಗರ (35), ಗುಲ್ನಾರ ಮನ್ಸೂಬ್ ಸೌದಾಗರ (6), ತೈಬಾ ಮನ್ಸೂಬ್ ಸೌದಾಗರ (4) ಮತ್ತು ಅಹ್ಮದರೈಜಾ ಮನ್ಸೂಬ್ ಸೌದಾಗರ (2) ಮೃತ ದುರ್ದೈವಿಗಳು.

Related Articles

Back to top button