Latest

ನೋಕಿಯಾ ಮೊಬೈಲ್ ನ್ನೇ ನುಂಗಿದ ಭೂಪ

ಪ್ರಗತಿವಾಹಿನಿ ಸುದ್ದಿ; ನವದೆಹಲಿ: ವ್ಯಕ್ತಿಯೋರ್ವ ನೋಕಿಯಾ 3310 ಮಾಡೆಲ್ ಮೊಬೈಲ್ ಫೋನ್ ನನ್ನೇ ನುಂಗಿದ ಘಟನೆ ಬೆಳಕಿಗೆ ಬಂದಿದೆ.

33 ವರ್ಷದ ಫಿನ್ನಿಷ್ ಕಂಪನಿ ಮಾಜಿ ಉದ್ಯೋಗಿ ಮೊಬೈಲ್ ನುಂಗಿದಾತ. ನಾಲ್ಕು ದಿನಗಳ ಕಾಲ ಮೊಬೈಲ್ ಹೊಟ್ಟೆಯಲ್ಲೇ ಇಟ್ಟುಕೊಂಡಿದ್ದ ಭೂಪ. ಮೊಬೈಲ್ ದೊಡ್ದ ಗ್ರಾತ್ರದ್ದಾಗಿದ್ದರಿಂದ ತೊಂದರೆಯಾಗಿದೆ. ಬಳಿಕ ಆಪರೇಷನ್ ಮೂಲಕ ಹೊರತೆಗೆಯಲಾಗಿದೆ.

Home add -Advt

ಮೊಬೈಲ್ ಬ್ಯಾಟರಿಯ ಕೊರೊಸಿಮ್ ಆಸಿಡ್ ಲೀಕ್ ಆಗುವ ಸಾಧ್ಯತೆ ಇತ್ತು. ಇದರಿಂದ ವ್ಯಕ್ತಿಯ ಪ್ರಾಣಕ್ಕೆ ಅಪಾಯವಿತ್ತು. ಸ್ಕ್ಯಾನ್ ಮಾಡಿದ ವೇಳೆ ಮೊಬೈಲ್ ಹೊಟ್ಟೆಯಲ್ಲಿ ಮೂರು ತುಂಡುಗಳಾಗಿರುವುದು ಗೋಚರಿಸಿತ್ತು. ಎರಡು ಗಂಟೆಗಳ ಕಾಲ ಆಪರೇಷನ್ ಮಾಡಿ ಹೊಟ್ಟೆಯಿಂದ ಮೊಬೈಲ್ ಹೊರತೆಗೆಯಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

Related Articles

Back to top button