Latest

*ಓವರ್ ಟೇಕ್ ಮಾಡಲು ಹೋಗಿ ಇಬ್ಬರ ಸಾವು*

ಪ್ರಗತಿವಾಹಿನಿ ಸುದ್ದಿ : ಅತಿವೇಗದಿಂದ ಚಾಲನೆ ಮಾಡುತ್ತಿದ್ದ ಇಬ್ಬರು ಬೈಕ್‌ ಸವಾರರು ಕಾರ್ ಒಂದನ್ನು ಓವರ್ ಟೇಕ್ ಮಾಡಲು ಹೋಗಿ ಅಪಘಾತದಲ್ಲಿ ಮೃತಪಟ್ಟಿರುವ ಘಟನೆ ಶಹಾಪುರದ ಮದ್ರಿಕೆ ಗ್ರಾಮದಲ್ಲಿ ನಡೆದಿದೆ. ಹಳ್ಳೆಪ್ಪ (45) ಹಾಗೂ ಮಲ್ಲಯ್ಯ (35) ಮೃತ ದುರ್ದೈವಿಗಳು.

ಹಳ್ಳೆಪ್ಪ ಹಾಗೂ ಮಲ್ಲಯ್ಯ ಒಂದೇ ಊರಿನವರಾಗಿದ್ದು, ಜೇವರ್ಗಿ ಬಳಿಯಿರುವ ತಮ್ಮ ಜಮೀನಿಗೆ ಹೋಗಿದ್ದರು. ವಾಪಸ್ ಊರಿಗೆ ಮರಳುವಾಗ ರಸ್ತೆಯಲ್ಲಿ ಕಾರ್ ಒಂದನ್ನು ಹಿಂದಿಕ್ಕಲು ಹೋಗಿ ಅಪಘಾತ ಸಂಭವಿಸಿದ್ದು ಇಬ್ಬರೂ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.

Home add -Advt

ಕಾರ್ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ಭೀಮರಾಯನ ಗುಡಿ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು ಮೃತ ದೇಹಗಳನ್ನು ಆಸ್ಪತ್ರೆಗೆ ರವಾನಿಸಿದ್ದಾರೆ. ಭೀಮರಾಯನ ಗುಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಾರ್ ಚಾಲಕನ ಪತ್ತೆಗೆ ಹುಡುಕಾಟ ಪ್ರಾರಂಭವಾಗಿದೆ.

Related Articles

Back to top button