Kannada NewsKarnataka NewsLatest
*BREAKING: ಬುರುಡೆ ಚಿನ್ನಯ್ಯ ಜೈಲಿನಿಂದ ರಿಲೀಸ್*

ಪ್ರಗತಿವಾಹಿನಿ ಸುದ್ದಿ: ಧರ್ಮಸ್ಥಳದ ವಿಬಿಧೆಡೆಗಳಲ್ಲಿ ನೂರಾರು ಶವಗಳನ್ನು ಹೂತಿಟ್ಟಿರುವುದಾಗಿ ಹೇಳಿದ್ದ ಮಾಸ್ಕ್ ಮ್ಯಾನ್, ಬುರುಡೆ ಚಿನ್ನಯ್ಯ ಜೈಲಿನಿಂದ ಬಿಡಿಗಡೆಯಾಗಿದ್ದಾನೆ.
ಕಳೆದ ನಾಲ್ಕು ತಿಂಗಳಿಂದ ಶಿವಮೊಗ್ಗ ಸೆಂಟ್ರಲ್ ಜೈಲಿನಲ್ಲಿದ್ದ ಆರೋಪಿ ಚಿನ್ನಯ್ಯಗೆ ನವೆಂಬರ್ 24ರಂದು ದಕ್ಷಿಣ ಕನ್ನಡ ಕೋರ್ಟ್ ಷರತ್ತುಬದ್ಧ ಜಾಮೀನು ಮಂಜೂರು ಮಾಡಿತ್ತು. 1 ಲಕ್ಷ ಬಾಂಡ್, ಇಬ್ಬರು ಶ್ಯೂರಿಟಿ ಕೇಳಿತ್ತು. ಆದರೆ ಷರತ್ತು ಪೂರೈಸಲು ಸಾಧ್ಯವಾಗದ ಕಾರಣ ಜಾಮೀನು ಸಿಕ್ಕು 23 ದಿನಗಳು ಕಳೆದರೂ ಜೈಲಿನಿಂದ ಬಿಡುಗಡೆಯಾಗದೇ ಜೈಲಿನಲ್ಲಿಯೇ ಇದ್ದ. ಈಗ ಚಿನ್ನಯ್ಯ ಪತ್ನಿ ಮಲ್ಲಿಕಾ ಕೋರ್ಟ್ ಗೆ ಶ್ಯೂರಿಟಿ ನೀಡಿದ್ದಾರೆ. ಜಾಮೀನು ಷರತ್ತುಗಳು ಪೂರೈಕೆಯಾಗಿರುವ ಹಿನ್ನೆಲೆಯಲ್ಲಿ ಕೋರ್ಟ್ ಚಿನ್ನಯ್ಯ ಬಿಡಿಗಡೆಗೆ ಆದೇಶ ನೀಡಿದೆ.
ಈ ಹಿನ್ನೆಲೆಯಲ್ಲಿ ಧರ್ಮಸ್ಥಳ ಪ್ರಕರಣದ ಆರೋಪಿ ಮಾಸ್ಕ್ ಮ್ಯಾನ್ ಶಿವಮೊಗ್ಗ ಜೈಲಿನಿಂದ ಬಿಡುಗಡೆಯಾಗಿದ್ದಾನೆ.


