Belagavi NewsBelgaum NewsElection NewsKannada NewsKarnataka NewsPolitics

​*ವಿಶೇಷ ಚೇತನಳ ಕೈ‌ಹಿಡಿದು ನಡೆದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್* ; *ಹಂಪಿಹೊಳಿಯಲ್ಲಿ ಸಚಿವರೊಂದಿಗೆ ರೋಷನ್ ಬೀ ಹೆಜ್ಜೆ*

*

 ಪ್ರಗತಿವಾಹಿನಿ ಸುದ್ದಿ, *ಬೆಳಗಾವಿ* : ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್ ಕಳೆದ ಎರಡು ದಿನಗಳಿಂದ ರಾಮದುರ್ಗ ವಿಧಾನಸಭಾ ಕ್ಷೇತ್ರದಾದ್ಯಂತ ಅಬ್ಬರದ ಪ್ರಚಾರ ಕೈಕೊಂಡಿದ್ದಾರೆ. ಹೋದಲೆಲ್ಲಾ ಕಾಂಗ್ರೆಸ್ ಅಭ್ಯರ್ಥಿ ಮೃಣಾಲ್‌ ಹೆಬ್ಬಾಳ್ಕರ್ ಅವರಿಗೆ ಕ್ಷೇತ್ರದ ಜನ ಅಭೂತಪೂರ್ವ ಬೆಂಬಲ ವ್ಯಕ್ತಪಡಿಸುತಿದ್ದಾರೆ. 

Home add -Advt

ರಾಮದುರ್ಗದ ಹಲಗತ್ತಿ, ಲಿಂಗದಾಳ, ಇಡಗಲ್, ಚಿಕ್ಕತಡಸಿ‌ ಗ್ರಾಮಗಳಲ್ಲಿ ಪ್ರಚಾರ ಮುಗಿಸಿದ ಸಚಿವರು, ಹಂಪಿಹೊಳಿಗೆ ಆಗಮಿಸಿದರು. ಹಂಪಿಹೊಳಿಯಲ್ಲಿ ಸಚಿವರಿಗೆ ಅಚ್ಚರಿ ಕಾದಿತ್ತು. ಸಚಿವರಿಗೆ ​ವಿಶೇಷ ಚೇತನ ಯುವತಿ ರೋಷನ್ ಬೀ ಎಂಬುವರು ಹೂ​ವು ಕೊಟ್ಟು ಸ್ವಾಗತಿಸಿದರು. ಸಚಿವರನ್ನು ಕಂಡು ಖುಷಿಗೊಂಡ ರೋಷನ್ ಬೀ, ಅವರ ಕೈಹಿಡಿದು ಪ್ರಚಾರ ನಿಗದಿಯಾಗಿದ್ದ ಸ್ಥಳದವರೆಗೂ ನಡೆದರು‌. 

ರೋಷನ್ ಬೀ ಅಭಿಮಾನ ಕಂಡು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಕೂಡ ಆಕೆಯೊಂದಿಗೆ ಮುಕ್ತವಾಗಿ ಮಾತನಾ​ಡುತ್ತ ಸಾಗಿದರು‌. ‘ಸಚಿವರನ್ನು ಇಷ್ಟು​ ದಿನ ಕೇವಲ ಟಿವಿ, ಪೇಪರ್ ಗಳಲ್ಲಿ ನೋಡುತ್ತಿದ್ದೆ. ಇವತ್ತು ಅವರನ್ನು ಹತ್ತಿರದಿಂದ ನೋಡಿ ಖುಷಿ‌ ಆಯಿತು. ನನಗೆ ​ಸ್ವಂತ ಮನೆ ಇಲ್ಲ. ನ​ನ್ನ ಅಕ್ಕ ಕೂಡ ​ವಿಕಲ ಚೇತನಳು, ಆಪರೇಷನ್ ಆಗಿದೆ. ನನ್ನ ಕೆಲವೊಂದು ಸಮಸ್ಯೆಗಳನ್ನು ಸಚಿವರಿಗೆ ಹೇಳಿರುವೆ.  ಸಮಸ್ಯೆಗಳಿಗೆ ಪರಿಹಾರ ನೀಡು​ವ ಭರವಸೆ ನೀಡಿದ್ದಾರೆ ಎಂದು ​ ರೋಷನ್ ಬೀ ಹೇಳಿ ಕೊಂಡರು.

 *ಮದುವೆ ಕಾರ್ಯಕ್ರಮದಲ್ಲಿ ಭಾಗಿ*

ಬಳಿಕ ರೋಷನ್ ಬೀ ಮನವಿ ಮೇರೆಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್​ ಅವರ ಸಂಬಂಧಿಕರ ಮದುವೆಯ ಆರತಕ್ಷತೆ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.​ ಜೊತೆಗೆ ರೋಷನ್ ಬೀ ತಮ್ಮ ಕುಟುಂಬ ಸದಸ್ಯರನ್ನು ಸಚಿವರಿಗೆ ಪರಿಚಯಿಸಿಕೊ​ಟ್ಟು ಸಂಭ್ರಮಿಸಿದರು.

ವಿಕಲ ಚೇತನಳ ಜೀವನೋತ್ಸಾಹ, ಸಚಿವರ ಬಗೆಗಿನ ಪ್ರೀತಿ, ಆಕೆಯ ಕುರಿತ ​ಸಚಿವರ ಕಾಳಜಿ​ ಎಲ್ಲವನ್ನೂ ನೋಡಿದ ಅಲ್ಲಿದ್ದವರಿಗೆ ಖುಷಿಯೋ ಖುಷಿ. 

Related Articles

Back to top button