Latest

ಕೆರೆಗೆ ಉರುಳಿದ ಬೈಕ್; ಗರ್ಭಿಣಿ ದುರ್ಮರಣ

ಪ್ರಗತಿವಾಹಿನಿ ಸುದ್ದಿ; ಮೈಸೂರು: ದಂಪತಿ ಸಂಚರಿಸುತ್ತಿದ್ದ ಬೈಕ್ ನಿಯಂತ್ರಣ ತಪ್ಪಿ ಕೆರೆಗೆ ಬಿದ್ದು ಗರ್ಭಿಣಿ ಮೃತಪಟ್ಟ ದಾರುಣ ಘಟನೆ ಮೈಸೂರು ಜಿಲ್ಲೆ ನಂಜನಗೂಡು ಸಮೀಪ ನಡೆದಿದೆ.

ಬಹಳಷ್ಟು ಲಗೇಜ್ ಇದ್ದ ಹಿನ್ನೆಲೆಯಲ್ಲಿ ಹ್ಯಾಂಡಲ್ ತಿರುಗಿಸಲಾಗದೇ ನಿಯಂತ್ರಣ ತಪ್ಪಿದ ಬೈಕ್ ಕೆರೆಗೆ ಬಿದ್ದು ದುರ್ಘಟನೆ ನಡೆದಿದೆ ಎಂದು ತಿಳಿದು ಬಂದಿದೆ. ದೇವನೂರು ಗ್ರಾಮದ ಯಮುನಾ(22) ಮೃತ ಮಹಿಳೆ. ಅವರ ಪತಿ ದಕ್ಷಿಣಾಮೂರ್ತಿ ಅಲಿಯಾಸ್ ನವೀನ್ (28) ಗಂಭೀರವಾಗಿ ಗಾಯಗೊಂಡಿದ್ದು ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.

Home add -Advt

ದಕ್ಷಿಣಾಮೂರ್ತಿ ಗರ್ಭಿಣಿ ಪತ್ನಿ ಯಮುನಾ ಜೊತೆ ಬೈಕ್ ನಲ್ಲಿ ನಂಜನಗೂಡು ಮಾರ್ಗವಾಗಿ ಸಿದ್ದಯ್ಯನಹುಂಡಿ ಗ್ರಾಮಕ್ಕೆ ತೆರಳುವ ವೇಳೆ ಈ ದುರ್ಘಟನೆ ಸಂಭವಿಸಿದೆ. ಬೈಕ್ ನಲ್ಲಿ ಗಂಡ ಹೆಂಡತಿ ಇಬ್ಬರೂ ಹೋಗುವ ಸಂದರ್ಭ ಬೈಕ್ ನ ಮುಂದೆ ಕೆಲವು ಲಗೇಜ್ ಇಟ್ಟುಕೊಂಡಿದ್ದ ಕಾರಣ ಬೈಕ್ ಹ್ಯಾಂಡಲ್ ತಿರುಗಿಸಲು ಆಗದೇ ಕೂಗಲೂರು ಗ್ರಾಮದ ಕೆರೆಗೆ ಬಿದ್ದಿದ್ದಾರೆ ಎನ್ನಲಾಗಿದೆ.
ತಬಸ್ಸುಮ್ ಅನುಮಾನಾಸ್ಪದ ಸಾವು ಪ್ರಕರಣ; ಸ್ನೇಹಿತ ಅರೆಸ್ಟ್

https://pragati.taskdun.com/latest/belagavi19-years-girl-deathaccused-arrestgoa/

Related Articles

Back to top button