Latest

ಬೆಳಗಾವಿಯಲ್ಲಿ 7 ಜನ ಕಣದಿಂದ ವಾಪಸ್: ಉಳಿದವರು 57

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ

ಬೆಳಗಾವಿ ಲೋಕಸಭಾ ಕ್ಷೇತ್ರದ ಚುನಾವಣೆ ಕಣದಿಂದ 7 ಜನ ಹಿಂದಕ್ಕೆ ಸರಿದಿದ್ದು, 57 ಜನ ಸ್ಪರ್ಧೆಯಲ್ಲಿ ಉಳಿದಿದ್ದಾರೆ.

ಅಶೋಕ ಪಾಂಡಪ್ಪ ಹಂಜಿ, ಮೋಹನ ಯಲ್ಲಪ್ಪ ಮೋರೆ, ಅಶೋಕ ಭಾವಕಣ್ಣಾ ಚೌಗಲೆ, ಗುರುಪುತ್ರ ಕೆಪ್ಪಣ್ಣಾ ಕುಳ್ಳೂರ, ಸಂಗಮೇಶ ನಾಗಪ್ಪ ಚಿಕ್ಕನರಗುಂದ, ಸಂಜೀವ್ ಪ್ರಾಣೇಶ ಗಣಾಚಾರಿ, ಸಂಜಯ ಅಶೋಕ ಪಾಟೀಲ ಎಂಬುವರು ನಾಮಪತ್ರಗಳನ್ನು ಹಿಂತೆಗೆದುಕೊಂಡಿದ್ದಾರೆ.

ಎಂಇಎಸ್ ನ ಮೋಹನ್ ಮೋರೆ ಸೇರಿದಂತೆ 7 ಜನ, ನಾಮಪತ್ರ ಹಿಂದಕ್ಕೆ ಪಡೆಯುವ ಕೊನೆಯ ದಿನವಾದ ಸೋಮವಾರ ಹಿಂದೆ ಸರಿದರು.

ಮೋಹನ್ ಮೋರೆ ಸೇರಿದಂತೆ 6 ಜನ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button