Kannada NewsKarnataka NewsLatest

ಸಂಜೀವ ಹನಮಸಾಗರ ವಿಧಿವಶ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ -ಭಾರತೀಯ ಜನತಾ ಪಾರ್ಟಿಯ ಮಾಜಿ ವಕ್ತಾರರೂ, ಬೆಳಗಾವಿ ಮಹಾನಗರ ಮಾಜಿ ಪ್ರಧಾನಕಾರ್ಯದರ್ಶಿಯೂ ಆಗಿದ್ದ ಸಂಜೀವ ಹನಮಸಾಗರ ವಿಧಿವಶರಾಗಿದ್ದಾರೆ.

ಸುಮಾರು 40 ವರ್ಷ ವಯಸ್ಸಿನ ಅವರು ಕಳೆದ ಕೆಲವು ಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಭಾನುವಾರ ರಾತ್ರಿ ಅವರು ಕೊನೆಯುಸಿರೆಳೆದರು. ಅವರಿಗೆ ತಾಯಿ, ಸಹೋದರ ಹಾಗೂ ಅಪಾರ ಬಂಧು ಬಳಗವಿದೆ.

Home add -Advt

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಮೂಲಕ ಭಾರತೀಯ ಜನತಾಪಾರ್ಟಿಗೆ ಬಂದಿದ್ದ ಸಂಜೀವ್, ಈಗಿನ ಕೇಂದ್ರ ಸಚಿವ ಸುರೇಶ ಅಂಗಡಿ ಅವರು  ಬಿಜೆಪಿ ಜಿಲ್ಲಾಧ್ಯಕ್ಷರಾಗಿದ್ದ ವೇಳೆ  ಪಕ್ಷದ ಮಾಧ್ಯಮ ಕಾರ್ಯದರ್ಶಿಯಾಗಿ ಕೆಲಸಮಾಡಿದ್ದರು.

ಭಾರತೀಯ ಜನತಾಪಾರ್ಟಿ ಬೆಳಗಾವಿ ಜಿಲ್ಲೆಯಲ್ಲಿ ಬೆಳೆಯುವುದಕ್ಕೆ ಸಂಜೀವ್ ಹನಮಸಾಗರ ಅವರ ಸೇವೆ ಬಹುದೊಡ್ಡದಿದೆ. ಬಿಜೆಪಿಗೆ ದೊಡ್ಡ ಪ್ರಮಾಣದಲ್ಲಿ ಮಾಧ್ಯಮ ಪ್ರಚಾರ ಕೊಡುವ ಕೆಲಸವನ್ನು ಅವರು ನಿಷ್ಠೆಯಿಂದ ಮಾಡಿದ್ದರು.

ಅವರ ಅಂತ್ಯಕ್ರಿಯೆ ಸದಾಶಿವನಗರ ಸ್ಮಶಾನ ಭೂಮಿಯಲ್ಲಿ ಸೋಮವಾರ ಬೆಳಗ್ಗೆ ನಡೆಯಿತು.

ಸಂತಾಪ 

ಸಂಜೀವ ಹನಮಸಾಗರ ನಿಧನಕ್ಕೆ  ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ, ಬಿಜೆಪಿ ರಾಜ್ಯ ಯುವ ಮೋರ್ಚಾ ಉಪಾಧ್ಯಕ್ಷ ರಾಜು ಚಿಕ್ಕನಗೌಡರ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

Related Articles

Back to top button