Kannada NewsKarnataka NewsLatestPolitics
*ಮತ್ತೊಂದು ಅಗ್ನಿ ಅವಘಡ; ಹೊತ್ತಿ ಉರಿದ ಪರ್ಫ್ಯೂಮ್ ಫ್ಯಾಕ್ಟರಿ*

ಪ್ರಗತಿವಾಹಿನಿ ಸುದ್ದಿ: ಪರ್ಫ್ಯೂಮ್ ಫ್ಯಾಕ್ಟರಿಯಲ್ಲಿ ಭೀಕರ ಸ್ಫೋಟ ಸಂಭವಿಸಿ ಇಡೀ ಫ್ಯಾಕ್ಟರಿ ಬೆಂಕಿಯಲ್ಲಿ ಹೊತ್ತಿ ಉರಿದ ಘಟನೆ ಬೆಂಗಳೂರಿನ ಕುಂಬಳಗೋಡು ರಾಮಸಂದ್ರದಲ್ಲಿ ನಡೆದಿದೆ.
ಫ್ಯಾಕ್ಟರಿಯಲ್ಲಿ ಇದ್ದಕ್ಕಿದ್ದಂತೆ ಸ್ಫೋಟ ಸಂಭವಿಸಿ, ಬೆಂಕಿಯ ಕೆನ್ನಾಲಿಗೆ ಇಡೀ ಫ್ಯಾಕ್ಟರಿ ತುಂಬೆಲ್ಲ ವ್ಯಾಪಿಸಿದೆ. ಬಳಿಕ ಕ್ಷಣಾರ್ಧದಲ್ಲಿ ಸತತವಾಗಿ ಸ್ಫೋಟಗಳು ಸಂಭವಿಸಿವೆ. ಸ್ಫೋಟದ ಸದ್ದಿಗೆ ಸುತ್ತಮುತ್ತಲಿನ ಮನೆಯವರು ಭಯ-ಭೀತಿಯಿಂದ ಹೊರಗೋಡಿ ಬಂದಿದ್ದಾರೆ.
ಘಟನಾ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ, ಪೊಲೀಸರು ದೌಡಾಯಿಸಿ ಬೆಂಕಿ ನಂದಿಸಲು ಹರಸಾಹಸ ಪಟ್ಟಿದ್ದಾರೆ.




