Latest

ಪ್ರಧಾನಿ ಮೋದಿ ಗಡ್ಡದ ರಹಸ್ಯ ಬಹಿರಂಗ

ಪ್ರಗತಿವಾಹಿನಿ ಸುದ್ದಿ; ಬಾಗಲಕೋಟೆ: ಪ್ರಧಾನಿ ಮೋದಿ ಗಡ್ಡ ಬಿಟ್ಟಿರುವುದಕ್ಕೂ ರಾಮ ಮಂದಿರ ನಿರ್ಮಾಣಕ್ಕೂ ಸಂಬಂಧವಿದೆಯೇ ಎಂಬ ಹೊಸ ಚರ್ಚೆ ಆರಂಭವಾಗಿದ್ದು, ಇದೀಗ ಪೇಜಾವರ ವಿಶ್ವಪ್ರಸನ್ನ ತೀರ್ಥ ಶ್ರೀಗಳು ನೀಡಿರುವ ಹೇಳಿಕೆ ಈ ಚರ್ಚೆಗೆ ಇನ್ನಷ್ಟು ಪುಷ್ಠಿ ನೀಡುವಂತಿದೆ.

ಬಾಗಲಕೋಟೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಕಾಣಿಕೆ ಸಂಗ್ರಹಕ್ಕೆ ಚಾಲನೆ ನೀಡಿದ ಸ್ವಾಮೀಜಿ, ನಮ್ಮಲ್ಲಿ ದೇವಸ್ಥಾನದ ಕಾರ್ಯ ನಡೆಯುವಾಗ ದೀಕ್ಷಾ ಬದ್ಧರಾಗುವುದಿದೆ. ಅದೇ ರೀತಿ ಪ್ರಧಾನಿ ಮೋದಿ ಅವರು ರಾಮ ಮಂದಿರ ನಿರ್ಮಾಣ ಕಾರ್ಯಕ್ಕಾಗಿ ದೀಕ್ಷೆ ತೊಟ್ಟಿದ್ದಾರೆ ಹಾಗಾಗಿ ಗಡ್ಡ ಬಿಟ್ಟಿರಬಹುದು.

Home add -Advt

ಮೋದಿಯವರು ರಾಮ ಮಂದಿರಕ್ಕೆ ಶಿಲಾನ್ಯಾಸ ನೆರವೇರಿಸಿದ್ದಾರೆ. ಮಂದಿರದ ಸಂಪೂರ್ಣ ಜವಾಬ್ದಾರಿಯನ್ನು ಹೊತ್ತಿರುವುದರಿಂದ ಸಹಜವಾಗಿ ನಮ್ಮಲ್ಲಿ ಕೇಶಾದಿಗಳನ್ನು ತೆಗೆಯೋದಿಲ್ಲ. ಮಂದಿರ ಆಗುವವರೆಗೂ ಗಡ್ಡ, ತಲೆ ಕೂದಲು ಬಿಟ್ಟಿರುತ್ತೇವೆ. ಬಹುಶ: ಮೋದಿ ಅವರು ಕೂಡ ಅದನ್ನೇ ಪಾಲಿಸುತ್ತಿರಬಹುದು ಎಂದಿದ್ದಾರೆ.

Related Articles

Back to top button