Belagavi NewsBelgaum NewsKannada NewsKarnataka NewsNationalPolitics

*ಶಾಸಕ ಮುನಿರತ್ನ ಎಸ್ಐಟಿ ವಶಕ್ಕೆ*

ಪ್ರಗತಿವಾಹಿನಿ ಸುದ್ದಿ: ಗುತ್ತಿಗೆದಾರನಿಗೆ ಜಾತಿನಿಂದನೆ, ಬೆದರಿಕೆ ಕೇಸ್‌ಗೆ ಸಂಬಂಧಪಟ್ಟಂತೆ ಹೆಚ್ಚಿನ ತನಿಖೆಗಾಗಿ ಮುನಿರತ್ನರವರನ್ನು ಎಸ್‌ಐಟಿ ವಶಕ್ಕೆ ಪಡೆದಿದೆ.

ಜಾತಿನಿಂದನೆ ಪ್ರಕರಣದಲ್ಲಿ ಬೇಲ್ ಸಿಕ್ಕಿದ್ದರೂ ಕೂಡಾ ಅತ್ಯಾಚಾರ ಆರೋಪದ ಕೇಸ್‌ನಲ್ಲಿ ಮತ್ತೆ ಪೊಲೀಸರ ವಶದಲ್ಲಿದ್ದ ಮುನಿರತ್ನ ಇದೀಗ ಎಸ್‌ಐಟಿ ಪೊಲೀಸರ ವಶವಾಗಿದ್ದಾರೆ.

Home add -Advt

ರಾಮನಗರ ಜಿಲ್ಲೆಯ ಕಗ್ಗಲೀಪುರ ಠಾಣೆ ಪೊಲೀಸರು ಅತ್ಯಾಚಾರ ಕೇಸ್‌ನಲ್ಲಿ ಮುನಿರತ್ನ ಅವರನ್ನು ಬಂಧಿಸಿದ್ದರು. ನಂತರ ನ್ಯಾಯಾಲಯ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ ನಂತರ ಪೊಲೀಸರು ಮುನಿರತ್ನ ಅವರನ್ನು ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಕಳುಹಿಸಿದ್ದರು.

ಈ ನಡುವೆ ಸರ್ಕಾರ, ಮುನಿರತ್ನ ವಿರುದ್ಧ ವೈಯಾಲಿ ಕಾವಲ್ ಠಾಣೆಯಲ್ಲಿ ದಾಖಲಾಗಿದ್ದ ಸುಲಿಗೆ, ಜೀವ ಬೆದರಿಕೆ, ಜಾತಿನಿಂದನೆ ಹಾಗೂ ಕಗ್ಗಲೀಪುರ ಠಾಣೆಯ ಅತ್ಯಾಚಾರ ಪ್ರಕರಣದ ತನಿಖೆಗೆ ಎಸ್‌ಐಟಿ ರಚಿಸಿ ಆದೇಶ ಹೊರಡಿಸಿತ್ತು. ಈ ಮೂರೂ ಪ್ರಕರಣಗಳಿಗೆ ಸಂಬಂಧಪಟ್ಟ ಕಡತ ಹಾಗೂ ದಾಖಲೆಗಳನ್ನು ಪೊಲೀಸರು ಈಗಾಗಲೇ ಎಸ್‌ಐಟಿಗೆ ಹಸ್ತಾಂತರಿಸಿದ್ದು, ಇಂದು ಮುನಿರತ್ನರವರನ್ನು ವಿಶೇಷ ತನಿಖಾ ತಂಡದ ಪೊಲೀಸರು ಹೆಚ್ಚುವರಿ ವಿಚಾರಣೆಗಾಗಿ ವಶಕ್ಕೆ ಪಡೆದಿದ್ದಾರೆ

Related Articles

Back to top button