Latest

ಮುರುಘಾಶ್ರೀಗಳು ICUಗೆ ಶಿಫ್ಟ್

ಪ್ರಗತಿವಾಹಿನಿ ಸುದ್ದಿ; ಚಿತ್ರದುರ್ಗ: ಪೋಕ್ಸೋ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಮುರುಘಾ ಮಠದ ಡಾ.ಶಿವಮೂರ್ತಿ ಶರಣರು ಎದೆನೋವಿನಿಂದ ಬಳಲುತ್ತಿದ್ದು, ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿರುವ ಶ್ರೀಗಳನ್ನು ಇದೀಗ ಐಸಿಯುಗೆ ಶಿಫ್ಟ್ ಮಾಡಲಾಗಿದೆ.

ಬಂಧನಕ್ಕೊಳಗಾಗಿದ್ದ ಮುರುಘಾಶ್ರೀಗಳು ಎದೆನೋವಿನಿಂದ ಬಳಲಿ ಚಿತ್ರದುರ್ಗ ಕಾರಾಗೃಹದಲ್ಲಿಯೇ ಕುಸಿದು ಬಿದ್ದಿದ್ದರು. ತಕ್ಷಣ ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ಮೂವರು ವೈದ್ಯರ ತಂಡದಿಂದ ಶ್ರೀಗಳ ತಪಾಸಣೆ ನಡೆದಿದೆ. ಈ ವೇಳೆ ಮುರುಘಾಶ್ರೀಗಳಿಗೆ ಹೃದಯ ಸಂಬಂಧಿ ಸಮಸ್ಯೆ ಇದ್ದು, ಅವರು ಬೆನ್ನುನೋವಿನಿಂದ ಬಳಲುತ್ತಿದ್ದಾರೆ ಎಂದು ತಿಳಿದುಬಂದಿದೆ.

Home add -Advt

ಹೃದ್ರೋಗ ತಜ್ಞರು ಜಿಲ್ಲಾಸ್ಪತ್ರೆಗೆ ಆಗಮಿಸಲಿದ್ದು, ಶ್ರೀಗಳ ಆರೋಗ್ಯ ತಪಾಸಣೆ ಮಾಡಲಿದ್ದಾರೆ. ಹೃದ್ರೋಗ ತಜ್ಞರು ನೀಡುವ ವರದಿ ಬಳಿಕ ಶ್ರೀಗಳನ್ನು ಬೆಂಗಳೂರಿನ ಜಯದೇವ ಆಸ್ಪತ್ರೆಗೆ ಶಿಫ್ಟ್ ಮಾಡುವ ಬಗ್ಗೆ ನಿರ್ಧರಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ಪ್ರಸ್ತುತ ಶ್ರೀಗಳನ್ನು ಜನರಲ್ ವಾರ್ಡ್ ನಿಂದ ಐಸಿಯುಗೆ ಶಿಫ್ಟ್ ಮಾಡಲಾಗಿದ್ದು, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಮುಂದುವರೆದಿದೆ ಎಂದು ತಿಳಿದುಬಂದಿದೆ.
ಮುರುಘಾಮಠಕ್ಕೆ ಉಸ್ತುವಾರಿಯಾಗಿ ಬೇರೆ ಸ್ವಾಮೀಜಿ ನೇಮಕ

https://pragati.taskdun.com/latest/murughashree-arrestmurugha-matha-inchargemahanta-rudra-swamiji/

Related Articles

Back to top button