Karnataka NewsLatest
*ಮಗು ಹಾಗೂ ವ್ಯಕ್ತಿಯ ಮೇಲೆ ಹರಿದು ಹೋದ ಟಿಪ್ಪರ್ ಲಾರಿ; ಇಬ್ಬರೂ ಸ್ಥಳದಲ್ಲೇ ದುರ್ಮರಣ*

ಪ್ರಗತಿವಾಹಿನಿ ಸುದ್ದಿ: ಹಾಲೋ ಬ್ಲಾಕ್ ತುಂಬಿದ್ದ ಟಿಪ್ಪರ್ ಲಾರಿಯೊಂದು ರಸ್ತೆ ಬದಿ ಹೋಗುತ್ತಿದ್ದ ಮಗು ಹಾಗೂ ವ್ಯಕ್ತಿಯ ಮೇಲೆ ಹರಿದು ಹೋಗಿದ್ದು, ಇಬ್ಬರೂ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ಗುಡ್ಡದಹಳ್ಳಿಯಲ್ಲಿ ನಡೆದಿದೆ.
ರಸ್ತೆಬದಿ ಟಿಪ್ಪರ್ ಲಾರಿಯನ್ನು ನಿಲ್ಲಿಸಿ ಚಾಲಕ ತೆರಳಿದ್ದ. ಹ್ಯಾಂಡ್ ಬ್ರೇಕ್ ಹಾಕಲು ಮರೆತಿದ್ದಾನೆ ಎನ್ನಲಾಗಿದೆ. ಟಿಪ್ಪರ್ ಚಲಿಸಿದ್ದು, ರಸ್ತೆಬದಿ ನಡೆದು ಹೋಗುತ್ತಿದ್ದ ಮಗು ಹಾಗೂ ವ್ಯಕ್ತಿಯ ಮೇಲೆ ಹರಿದಿದೆ. ಲಾರಿ ಚಕ್ರಕ್ಕೆ ಸಿಲುಕಿದ ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಮೃತರ ಗುರುತು ಪತ್ತೆಯಾಗಿಲ್ಲ. ಅಪಘಾತದ ಬಳಿಕ ಟಿಪ್ಪರ್ ಲಾರಿ 8 ಬೈಕ್ ಹಾಗೂ 2 ಕಾರುಗಳಿಗೂ ಗುದ್ದಿದೆ. ಸ್ಥಳಕ್ಕೆ ಪೊಲೀಸರು ದೌಡಾಯಿಸಿದ್ದಾರೆ.



