Kannada NewsKarnataka NewsLatest

ಅಥಣಿ ಜನರ ಬಹುದಿನಗಳ ಕನಸು ಸಾಕಾರ

 ನೂತನ ಆರ್ ಟಿ ಓ ಕಚೇರಿ ನಾಳೆ ಉದ್ಘಾಟನೆ

ಪ್ರಗತಿವಾಹಿನಿ ಸುದ್ದಿ, ಅಥಣಿ : ಸೋಮವಾರ (ನಾಳೆ) ಅಥಣಿ ಪಟ್ಟಣದಲ್ಲಿ ಸಹಾಯಕ ಪ್ರಾದೇಶಿಕ ಸಾರಿಗೆ ನೂತನ ಕಚೇರಿಯನ್ನು ಸಾರಿಗೆ ಸಚಿವ ಲಕ್ಷ್ಮಣ ಸವದಿ ಉದ್ಘಾಟನೆ ಮಾಡಲಿದ್ದಾರೆ.

 ಅಥಣಿಯಲ್ಲಿ ಪ್ರಾದೇಶಿಕ ಸಾರಿಗೆ ಕಚೇರಿ ತೆರೆಯಬೇಕೆನ್ನುವ ಬೇಡಿಕೆ ಬಹುದಿನಗಳಿಂದ ಇತ್ತು.  ಸಾರಿಗೆ ಸಚಿವರೂ ಆಗಿರುವ ಡಿಸಿಎಂ ಲಕ್ಷ್ಮಣ್ ಸವದಿ ಸತತ ಪ್ರಯತ್ನ ಫಲವಾಗಿ ಸೋಮವಾರ ಪಟ್ಟಣದ ರೇಣುಕಾ ಮುಂದಿರ ಸಮೀಪದ ಕಚೇರಿ ಉದ್ಘಾಟನೆ ನೆರವೇರಲಿದೆ. ನಾಳೆ ಮಧ್ಯಾಹ್ನ ೧ ಗಂಟೆಗೆ ಜತ್-ಜಂಬೋಟಿ ರಸ್ತೆ (ಗೋಕಾಕ ರಸ್ತೆ ) ಯಲ್ಲಮ್ಮಾ ದೇವಸ್ಥಾನದ ಎದುರಿಗೆ ಉದ್ಘಾಟನೆ ನಡೆಯಲಿದೆ.

Home add -Advt

ಕೇಂದ್ರ  ಸಚಿವ ಸುರೇಶ್ ಅಂಗಡಿ ಹಾಗು ಶಾಸಕ ಮಹೇಶ ಕುಮಟಳ್ಳಿ ಭಾಗವಹಿಸಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related Articles

Back to top button