Latest

ಆತ್ಮಾಹುತಿ ಬಾಂಬ್ ದಾಳಿಗೆ ಐವರು ಸೈನಿಕರು ಬಲಿ

ಪ್ರಗತಿವಾಹಿನಿ ಸುದ್ದಿ; ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ತಾಲಿಬಾನಿಗಳು ಆತ್ಮಾಹುತಿ ಬಾಂಬ್ ದಾಳಿ ನದೆಸಿದ್ದು, ಐವರು ಸೈನಿಕರು ಮೃತಪಟ್ಟಿದ್ದಾರೆ. 20ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.

ಪಾಕಿಸ್ತಾನದ ಬಲೋಚಿಸ್ತಾನ ಬಳಿಯ ಮುಸ್ಟಂಗ್ ಚೆಕ್ ಪೋಸ್ಟ್ ಬಳಿ ಬೈಕ್ ನಲ್ಲಿ ಬಂದ ತಾಲಿಬಾನಿ ಆತ್ಮಾಹುತಿ ದಾಳಿಕೋರ ವಾಹನವೊಂದಕ್ಕೆ ಡಿಕ್ಕಿ ಹೊಡೆದಿದ್ದಾನೆ. ಘಟನೆಯಲ್ಲಿ ಪಾಕಿಸ್ತಾನದ ಐವರು ಸೈನಿಕರು ಸಾವನ್ನಪ್ಪಿದ್ದು, 20ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ.

Home add -Advt

ಈ ದಾಳಿಯ ಹೊಣೆ ಹೊತ್ತಿರುವ ಪಾಕಿಸ್ತಾನಿ ತಾಲಿಬಾನಿಗಳು 25 ಪಾಕ್ ಸೈನಿಕರನ್ನು ಹತ್ಯೆಗೈದಿರುವುದಾಗಿ ಹೇಳಿಕೊಂಡಿದೆ.
ಗಣೇಶೋತ್ಸವಕ್ಕೆ ಹೊಸ ಗೈಡ್ ಲೈನ್

Related Articles

Back to top button